ಜಿಂಕೆ ಕೋಡು,ಆಮೆ ವಶ: ನಾಲ್ವರ ಬಂಧನ !

Kannada News

14-10-2017

ತಿರುವನಂತಪುರಂ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾ೦ತರ ರೂಪಾಯಿ ಬೆಲೆ ಬಾಳುವ ಜಿಂಕೆ ಕೋಡು ಮತ್ತು ಆಮೆಗಳನ್ನು ಕಾಸರಗೋಡು ಅರಣ್ಯ ಇಲಾಖಾ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುಂಬಳೆ ಮೊಗ್ರಾಲ್ ಮುಹಮ್ಮದ್ ಅಬ್ದುಲ್ಲಾ ಮೊಯ್ದಿನ್ (46), ಮೊಗ್ರಾಲ್ ವಿ.ಇಮಾಂ ಅಲಿ (49), ಮೊಗ್ರಾಲ್ ಕೊಪ್ರ ಬಜಾರ್ ನ ಬಿ.ಎಂ ಕಾಸಿಂ (40), ಮಾಯಿಪ್ಪಾಡಿಯ ಕರೀಂ (40) ಎಂದು ಗುರುತಿಸಲಾಗಿದೆ. ನಾಲ್ವರು ಮುಂಬೈಯ ತಂಡವೊಂದಕ್ಕೆ ಜಿಂಕೆ ಕೋಡು ಮತ್ತು ಆಮೆಯನ್ನು ಹಸ್ತಾತರಿಸಲು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದರು ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಸಾಗಾಟ ತಂಡದ ಬಗ್ಗೆ ಕೆಲ ದಿನಗಳ ಹಿಂದೆಯೇ ಅರಣ್ಯಾಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ನಿಗಾ ಇರಿಸಿದ್ದು, ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ನಾಲ್ವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ