ಗೌರಿ ಹತ್ಯೆ: ಏನ್ ಗೊತ್ತಿದ್ರೂ ಹೇಳಿ..ಎಸ್ಐಟಿ ಮನವಿ

Kannada News

14-10-2017

ಪರ್ತಕರ್ತೆ ಗೌರಿ ಲಂಕೇಶ್, ಇದೇ ಸೆಪ್ಟಂಬರ್ 6 ರಂದು ತಮ್ಮ ಮನೆಯ ಎದುರಲ್ಲೇ ಹತ್ಯೆಗೀಡಾಗಿದ್ದರು. ಗೌರಿ ಹತ್ಯೆಗೆ ಸಂಬಂಧಿಸಿದಂತೆ, ರಾಜ್ಯಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಎಸ್ಐಟಿಯವರು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇಂದು, ಇಬ್ಬರು ಹಂತಕರನ್ನು ಬಿಂಬಿಸುವ ಮೂರು ರೇಖಾಚಿತ್ರಗಳನ್ನು ಎಸ್ಐಟಿ ಬಿಡುಗಡೆ ಮಾಡಿದೆ. ಹಂತಕರನ್ನು ಕಂಡಿರಬಹುದಾದ ಜನರು ನೀಡಿರುವ ಮಾಹಿತಿಗಳನ್ನು ಆಧರಿಸಿ, ಈ ರೇಖಾ ಚಿತ್ರಗಳನ್ನು ತಯಾರಿಸಲಾಗಿದೆ.  ಆದರೆ, ಈ ಹಂತಕರು ಯಾರು? ಅವರ ಗುರುತೇನು? ಅವರು ಯಾವ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾರೆ? ಗೌರಿ ಹತ್ಯೆ ಮಾಡಲು ಕಾರಣಗಳೇನು?  ಅನ್ನುವುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ ಎಂದು ಎಸ್ಐಟಿ ತಿಳಿಸಿದೆ. ಆರೋಪಿಗಳ ಬಗ್ಗೆ ಯಾರಲ್ಲಾದರೂ ಯಾವುದೇ ರೀತಿಯದ್ದಾದರೂ ಸುಳಿವು, ಮಾಹಿತಿಗಳಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಎಸ್ಐಟಿ ಮುಖ್ಯಸ್ಥ  ಬಿ.ಕೆ.ಸಿಂಗ್ ಮನವಿ ಮಾಡಿದ್ದಾರೆ.

ಮೊಬೈಲ್ ನಂ. 9480800202 ಗೆ ಮತ್ತು, Email-sit.glankesh@ksp.gov.in ಮೂಲಕವಾದರೂ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ