ಬೈಕ್ ಸವಾರನ ಮೇಲೆ ಗುಂಡಿನ ದಾಳಿ !

Kannada News

14-10-2017

ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನದಲ್ಲಿ ಗ್ರಾಮದತ್ತ ತೆರಳುತ್ತಿದ್ದ ವ್ಯಕ್ತಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಬಳಿ ನಡೆದಿದೆ.

ಗ್ರಾಮದ ಮುದ್ದುಕೃಷ್ಣ ಕೊಲೆಯಾದ ವ್ಯಕ್ತಿ. ಮೃತ ವ್ಯಕ್ತಿ ದೊಡ್ಡಬಳ್ಳಾಪುರ ಕಡೆಯಿಂದ ಗ್ರಾಮದತ್ತ ತೆರಳುತ್ತಿದ್ದ ವೇಳೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿಯೆ ಮುದ್ದುಕೃಷ್ಣ ಕುಸಿದು ಬಿದ್ದಿದ್ದಾರೆ, ಹೀಗಾಗಿ ರಸ್ತೆಯಲ್ಲಿ ಬರುತ್ತಿದ್ದ ಸ್ಥಳೀಯರು ಅಪಘಾತವಾಗಿರಬಹುದು ಎಂದು ಭಾವಿಸಿ ಕೂಡಲೆ ಅವರನ್ನು ದೊಡ್ಡಬಳ್ಳಾಪುರದ ಆಸ್ವತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮೃತನನ್ನ ಪರೀಕ್ಷಿಸಿದ ವೈದ್ಯರು ಮುದ್ದುಕೃಷ್ಣ ಗುಂಡಿನ ದಾಳಿಯಿಂದ ಸಾವನ್ನಪಿರುವುದಾಗಿ ದೃಢಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ