ಬಿಬಿಎಂಪಿ ವಿರುದ್ಧ ಹರಿಹಾಯ್ದ ಬಿಎಸ್ ವೈ

Kannada News

14-10-2017

ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆ ವೇಳೆ ಚರಂಡಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಕುರುಬರಹಳ್ಳಿಯ ಅರ್ಚಕ ವಾಸುದೇವ ಭಟ್ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಕುಟುಂಬ ವರ್ಗದವರನ್ನು ಸಂತೈಸಿದರು. ಬೆಳಿಗ್ಗೆ ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್.ಅಶೋಕ್ ಮತ್ತಿತರರೊಂದಿಗೆ ಕುರುಬರಹಳ್ಳಿರಯಲ್ಲಿರುವ ವಾಸುದೇವಭಟ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಅರ್ಚಕರ ಮನೆಯವರ ದುಃಖದ ಕಟ್ಟೆ ಒಡೆದಿತ್ತು. ವಾಸುದೇವಭಟ್ ಅವರ ಪತ್ನಿ ಹಾಗೂ ಅವರ ತಂದೆ-ತಾಯಿಯನ್ನು ಬಿಎಸ್‍ವೈ ಸಾಂತ್ವಾನಗೊಳಿಸಿದರು.

ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಬಿಬಿಎಂಪಿ ಅಭಿವೃದ್ಧಿ ಕಡೆ ಗಮನ ಹರಿಸದೆ ಕೇವಲ ‘ಏಜೆಂಟ್’ ನಂತೆ ಕಾರ್ಯ ನಿರ್ವಹಿಸುತ್ತಿದೆ. ಇದರ ಪರಿಣಾಮ ಜನ ಮಳೆ ಅನಾಹುತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.  ಮಳೆಯಿಂದಾಗಿ ಮೃತರಾದ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ವಿತರಿಸಿದ ಬಿ.ಎಸ್.ವೈ, ಬಿಬಿಎಂಪಿಯಲ್ಲಿ ನಾಲ್ಕು ಸಾವಿರ ಕೋಟಿ ಅನುದಾನ ಸೋರಿಕೆಯಾಗಿದೆ. ರಸ್ತೆ ಗುಂಡಿಗೆ ಈಗಾಗಲೇ ಹಲವರು ಮೃತಪಟ್ಟಿದ್ದಾರೆ. ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಕೂಡ ಬಿಬಿಎಂಪಿ ಭ್ರಷ್ಟಚಾರ ಎಸಗಿದೆ. ಬಿಬಿಎಂಪಿ ಕಪ್ಪು ಪಟ್ಟಿಗೆ ಸೇರಿದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ಭ್ರಷ್ಟಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಮಳೆ ಹಾನಿ ಪ್ರದೇಶಗಳಲ್ಲಿ ನಾವು ರಾಜಕೀಯ ಮಾಡಲು ಹೋಗಿಲ್ಲ. ಈ ಬಗ್ಗೆ ಸರ್ಕಾರದ ಕಣ್ಣು ತೆರದು ಜನರ ರಕ್ಷಣೆ ಕಾರ್ಯಕ್ಕೆ ಮಾಡಬೇಕು ಎಂಬ ಉದ್ದೇಶದಿಂದ ಭೇಟಿ ನೀಡಿದ್ದೇವೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ