ವಾಸುದೇವ್ ಭಟ್ ಮೃತ ದೇಹ ಪತ್ತೆ

Kannada News

14-10-2017

ಬೆಂಗಳೂರು: ವರುಣನ ಆರ್ಭಟಕ್ಕೆ ನಿನ್ನೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ತಾಯಿ-ಮಗಳ ಶೋಧಕಾರ್ಯ ತೀವ್ರಗೊಂಡಿದ್ದು, ಸುಮನಹಳ್ಳಿ ಸಮೀಪದ ರಾಜಕಾಲುವೆಯಲ್ಲಿ ಅರ್ಚಕ ವಾಸುದೇವ ಭಟ್ ಅವರ ಮೃತದೇಹ ಪತ್ತೆಯಾಗಿದೆ. ನಿನ್ನೆ ರಾತ್ರಿಯಿಂದ ಕಾರ್ಯಾಚರಣೆ ನಡೆಸಿದ ಎನ್‍ಡಿಆರ್‍ಎಫ್, ಎಸ್‍ಟಿಆರ್‍ಎಫ್, ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ವಾಸುದೇವ ಭಟ್ ಅವರ ಮೃತದೇಹ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ತಾಯಿ ನಿಂಗವ್ವ ಹಾಗೂ ಮಗಳು ಪುಷ್ಪಾ ಅವರ ದೇಹಕ್ಕಾಗಿ ಶೋಧಕಾರ್ಯ ತೀವ್ರಗೊಳಿಸಿದ್ದಾರೆ.

ನಿನ್ನೆ ಸಂಜೆ ಮಹಾಲಕ್ಷ್ಮಿ ಲೇಔಟ್‍ನ ಕುರುಬರಹಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಶಂಕರಮಠ ವಾರ್ಡ್‍ನ ವೆಂಕಟೇಶ್ವರ ದೇವಸ್ಥಾನದ ಬಳಿ ಅರ್ಚಕ ವಾಸುದೇವ ಭಟ್ ಅವರು ಕೊಚ್ಚಿಹೋಗಿದ್ದರೆ, 16ನೆ ಕ್ರಾಸ್ ಸಮೀಪ ತಾಯಿ-ಮಗಳು ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ನಾಲ್ಕು ತಂಡಗಳು ನಿನ್ನೆ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ್ದು, ಎರಡು ಗಂಟೆ ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮುಂದುವರಿಸಿದ ಕಾರ್ಯಾಚರಣೆಯಲ್ಲಿ ವಾಸುದೇವ ಭಟ್ ಅವರ ದೇಹ ಪತ್ತೆಯಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ