ಮೆಟ್ರೋ ನಿಲ್ದಾಣದಲ್ಲಿ ಪೇ ಅಂಡ್ ಪಾರ್ಕ್ !

Kannada News

14-10-2017

ಬೆಂಗಳೂರು: ನಗರದ ಅತ್ಯಂತ ಜನದಟ್ಟಣೆಯ ಮೆಟ್ರೊ ನಿಲ್ದಾಣವಾದ ಮೆಜೆಸ್ಟಿಕ್‍ ನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಹಣ ಪಾವತಿಸಿ ವಾಹನ ತಂಗಿಸುವ ಸೌಲಭ್ಯ ಕಲ್ಪಿಸಲಾಗಿದೆ.

ಮೆಟ್ರೊ ನಿಲ್ದಾಣದ ಎರಡು ಪ್ರವೇಶದ್ವಾರವಾದ ಟಾಂಕ್ ಬಂಡ್ ರಸ್ತೆ ಮತ್ತು ಗುಬ್ಬಿ ತೋಟದಪ್ಪ ರಸ್ತೆಯ ದ್ವಾರದಲ್ಲಿ ಪ್ರಯಾಣಿಕರಿಗೆ ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ವ್ಯವಸ್ಥೆ ನೀಡಲಾಗಿದೆ. ಈ ಜಾಗದಲ್ಲಿ 82 ಕಾರುಗಳಿಗೆ ಮತ್ತು 500 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ಯು.ಎ.ವಸಂತ ರಾವ್ ತಿಳಿಸಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆಗೆ ಇತ್ತೀಚೆಗೆ ಕರೆಯಲಾಗಿದ್ದ ಟೆಂಡರ್ ಗೆ ಅನುಮತಿ ಸಿಕ್ಕಿದ್ದು ಇನ್ನು 10 ದಿನಗಳೊಳಗೆ ಪಾರ್ಕಿಂಗ್ ವ್ಯವಸ್ಥೆ ಕಾರ್ಯಾರಂಭ ಮಾಡಲಾಗುವುದು, ವಾಹನಗಳ ಸಂಚಾರದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ದಟ್ಟಣೆಯುಂಟಾಗದಂತೆ ನೋಡಿಕೊಳ್ಳಲು ನಾಲ್ಕು ಪ್ರವೇಶದ್ವಾರಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿಯವರೆಗೆ ಮೆಟ್ರೊದಲ್ಲಿ ಸಂಚರಿಸಬೇಕಿದ್ದ ಪ್ರಯಾಣಿಕರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ವಾಹನಗಳನ್ನು ನಿಲ್ಲಿಸಿ ಹೋಗಬೇಕಾಗಿತ್ತು. ಇದೀಗ ಮೆಜೆಸ್ಟಿಕ್‍ ನ ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಕಾದು ನೋಡಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ