ಮಹಾ ಮಳೆಗೆ 8 ಮಂದಿ ಬಲಿ

Kannada News

14-10-2017

ಬೆಂಗಳೂರು: ರಾಜಧಾನಿ ಸೇರಿ ರಾಜ್ಯಾದ್ಯಂತ ನಿನ್ನೆ ವ್ಯಾಪಕ ಮಳೆ ಸುರಿದಿದೆ. ಜವರಾಯನ ರೂಪದಲ್ಲಿ ಅಬ್ಬರಿಸಿದ ಗುಡುಗು ಸಹಿತ ಮಳೆಗೆ 8 ಮಂದಿ ಬಲಿಯಾಗಿದ್ದಾರೆ.  ಅಲ್ಲದೇ ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ರಾಜಕಾಲುವೆಯಲ್ಲಿ ಅರ್ಚಕ ಸೇರಿ ಮೂವರು ಕೊಚ್ಚಿ ಹೋಗಿದ್ದರೆ, ಮತ್ತೊಂದೆಡೆ ಮನೆ ಗೋಡೆ ಕುಸಿತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮಲಾಬಾದ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಸಿದ್ದಪ್ಪ ಭೀಮಪ್ಪ ವಾಘಮೋಡೆ ಎಂದು ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ರಾಮದುರ್ಗ ತಾಲ್ಲೂಕಿನ ದೊಡಮಂಗಡಿ ಗ್ರಾಮದಲ್ಲಿ ಗೋಡೆ ಕುಸಿತದಿಂದ ಒಂದೇ ಕುಟುಂಬದ ಸಿದ್ಲಿಂಗಪ್ಪ ಕಲ್ಲಪ್ಪ ಪೀರಗಿ, ಶಟ್ಟೆವ್ವ ಸಿದ್ಲಿಂಗಪ್ಪ ಪೀರಗಿ ಗಾಯಗೊಂಡಿದ್ದಾರೆ.

ಇನ್ನು ಚಿಕ್ಕಮಗಳೂರು ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಲಕ್ಷ್ಮಯ್ಯ(52) ಎನ್ನುವ ರೈತ ಸಂಜೆ ಹೊಲದಲ್ಲಿ ಅವರೆಕಾಯಿ ಕುಯ್ಯುತ್ತಿದ್ದ ವೇಳೆ ಮಳೆ ಆರ್ಭಟ ಜೋರಾಗಿದ್ದು, ಸಮೀಪದ ಮರದಡಿಯಲ್ಲಿ ನಿಂತಿದ್ದರು, ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನಲ್ಲಿ ಹರಿಯುವ ಅಮರ್ಜಾ ನದಿಯ ಸೆಳವಿನಲ್ಲಿ ಬಾಲಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ. ಸಾಗರ ಧರಿಗೊಂಡ (15) ಅಮರ್ಜಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಬಾಲಕ. ನೀರು ತರಲು ಹಳ್ಳಕ್ಕೆ ಹೋಗಿದ್ದ ವೇಳೆಯಲ್ಲಿ ಅವಘಡ ಸಂಭವಿಸಿದೆ. ಒಟ್ಟಾರೆ ಮಹಾ ಮಳೆಗೆ ಜನ ಭೀತಿಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ