ಪೊಲೀಸ್ ಬಲೆಗೆ ಅಂತರಾಜ್ಯ ಕಳ್ಳರು !

Kannada News

13-10-2017

ಬೆಂಗಳೂರು: ಮೋಜು ಮಸ್ತಿಗಾಗಿ ದರೋಡೆ ಮಾಡುತ್ತಿದ್ದ ಅಂತರಾಜ್ಯ ಐವರು ಕಳ್ಳರನ್ನ ನೆಲಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಅಭಿಷೇಕ್ (24), ಕೀರ್ತಿ ರಾಜು (24), ಮನೋಜ್ (22), ಅಶ್ರಫ್ ಅಲಿ (30) ಮತ್ತು ಕಾರ್ತಿಕ್ ಗೌಡ (22) ಬಂಧಿತ ಆರೋಪಿಗಳು. ಬಂಧಿತರು ಸುಮಾರು 10 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಮುಖ್ಯವಾಗಿ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಕೇಸ್‍ ನಲ್ಲಿಯೂ ಭಾಗಿಯಾಗಿದ್ದರು.

ಪಟ್ಟಣದ ತುಮಕೂರು ರಸ್ತೆಯಲ್ಲಿನ ಚಂದು ಡಾಬಾ ಬಳಿ ತಡರಾತ್ರಿ ದರೋಡೆಗೆ ಹೊಂಚುಹಾಕುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಲ್ಲದೆ ಬೆಂಗಳೂರು-ತುಮಕೂರು ಹೆದ್ದಾರಿ ಮತ್ತು ನೈಸ್ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಬಂಧಿತರಿಂದ 2 ಬೈಕ್, 4 ಮೊಬೈಲ್, 1 ಲಾಂಗ್ ಹಾಗೂ 4 ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ