ಇರಾನಿ ಗ್ಯಾಂಗ್‍ ನ ಮೂವರು ಅರೆಸ್ಟ್

Kannada News

13-10-2017

ಬೆಂಗಳೂರು: ಅಂತರರಾಜ್ಯ ಇರಾನಿ ಗ್ಯಾಂಗ್‍ ನ ಮೂವರು ಸರಗಳ್ಳರು ಸೇರಿದಂತೆ ಕಳವು ಮಾಡಿದ ಬೈಕ್‍ ಗಳಲ್ಲಿ ಸಂಚರಿಸುತ್ತಾ ಒಂಟಿ ಮಹಿಳೆಯರ ಸರಗಳವು ಮಾಡುತ್ತಿದ್ದ 13 ಮಂದಿ ಸರಗಳ್ಳರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 65 ಲಕ್ಷ 50 ಸಾವಿರ ಮೌಲ್ಯದ 2 ಕೆಜಿ 10 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇರಾನಿ ಗ್ಯಾಂಗ್ ನ ಆಂಧ್ರದ ಅನಂತಪುರದ ಸಲ್ಮಾನ್ ಅಬ್ಬಾಸ್ (28), ಮುಂಬೈನ ಥಾಣೆಯ ಖರಾರ್ ಹುಸೇನ್ ಅಲಿಯಾಸ್ ಹುಸೇನಿ (36), ಕಲ್ಬುರ್ಗಿಯ ಇರಾನಿ ಗ್ಯಾಂಗ್ ನ ಮೊಹ್ಮದ್ ಸಯ್ಯದ್ (31) ಅವರ ಜೊತೆಗೆ ಸ್ಥಳೀಯರಾದ 9 ಮಂದಿ ಸರಗಳ್ಳರನ್ನು ಬಂಧಿಸಿ 42 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ .

ಇರಾನಿ ಗ್ಯಾಂಗ್ ನ ಸಲ್ಮಾನ್ ಅಬ್ಬಾಸ್ ನಿಂದ ನಗರದ ದಕ್ಷಿಣದಲ್ಲಿ 8, ಉತ್ತರ 7, ಕೇಂದ್ರ 4, ಪಶ್ಚಿಮ ಹಾಗೂ ಈಶಾನ್ಯದ ತಲಾ ಒಂದು ಸೇರಿ 21 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಿ, 35 ಲಕ್ಷ ಮೌಲ್ಯದ 1200 ಗ್ರಾಂ ಚಿನ್ನದ ಸರಗಳನ್ನು ಪತ್ತೆ ಹಚ್ಚಲಾಗಿದೆ. ಮತ್ತೊಬ್ಬ ಆರೋಪಿ ಹುಸೇನಿಯನ್ನು ಥಾಣೆಯ ಬಳಿ ಬಂಧಿಸಿ ದಕ್ಷಿಣ ವಿಭಾಗದ 5 ಸೇರಿದಂತೆ 8 ಸರಗಳವು ಪ್ರಕರಣಗಳನ್ನು ಪತ್ತೆ ಹಚ್ಚಿ 12 ಲಕ್ಷ ಮೌಲ್ಯದ 450 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ ಕುಮಾರ್ ತಿಳಿಸಿದರು.

ಗಿರಿ ನಗರ ಪೊಲೀಸರು ಇರಾನಿ ಗ್ಯಾಂಗ್‍ ನ  ಮತ್ತೊಬ್ಬ ಆರೋಪಿ ಮೊಹ್ಮದ್ ಸಯೈದ್ ನನ್ನು ಬಂಧಿಸಿ 4 ಚಿನ್ನದ ಸರ ಅಪಹರಣ ಪ್ರಕರಣಗಳನ್ನು ಪತ್ತೆಹಚ್ಚಿ, 3 ಲಕ್ಷ ಮೌಲ್ಯದ ಚಿನ್ನಾಭರಣ, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಜೊತೆಗೆ ಗಾಂಧಿ ನಗರದ ಮೊಹ್ಮದ್ ಮುಜಾಹಿದ್ (21), ಕೆಜಿ ಹಳ್ಳಿಯ ಸೈಯದ್ ಫೌಜಾನ್ ಅಹ್ಮದ್ (19), ಮೊಹ್ಮದ್ ಜೀಶಾನ್ (24), ಸೈಯದ್ ಸೈಫ್ (20), ಹೆಣ್ಣೂರಿನ ಅತಾವು ಸಮ್ಮದ್ ಶೇಕ್ (28)ನನ್ನು ಜೆಪಿ ನಗರ ಪೊಲೀಸರು ಬಂಧಿಸಿ, 4 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಿ, 8 ಲಕ್ಷ 75 ಸಾವಿರ ಮೌಲ್ಯದ 190 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಜ್ವಲ್ ಕುಮಾರ್ ಎಂಬ ಸರಗಳ್ಳನನ್ನು ಬಂಧಿಸಿ 85 ಸಾವಿರ ಮೌಲ್ಯದ 30 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡರೆ, ಕೋಣನಕುಂಟೆ ಪೆÇಲೀಸರು ತಬ್ರೇಸ್ ಎಂಬಾತನನ್ನು ಬಂಧಿಸಿ 1 ಲಕ್ಷ 30 ಸಾವಿರ ಮೌಲ್ಯದ 42 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಕೆಂಪೇಗೌಡನಗರ ಪೊಲೀಸರು ಪುಟ್ಟೇನಹಳ್ಳಿಯ ಸಿದ್ಧಿಕ್ ಎಂಬ ಸರಗಳ್ಳನನ್ನು ಬಂಧಿಸಿ ನಾಲ್ಕೂವರೆ ಲಕ್ಷ ಮೌಲ್ಯದ 109 ಗ್ರಾಂ ತೂಕದ ಚಿನ್ನದ ಸರಗಳು ಹಾಗೂ ಕಳವು ಮಾಡಿದ್ದ 2 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. 

ಇರಾನಿ ಗ್ಯಾಂಗ್ ನ ಸರಗಳ್ಳರು ಕಳವು ಮಾಡಿದ ಬೈಕ್ ಗಳಲ್ಲಿ ಸರಗಳ್ಳತನ ಮಾಡುತ್ತಿರುವುದು ಪತ್ತೆಯಾಗಿದೆ. ಕಳವು ಮಾಡಿದ ಬೈಕ್ ನ ನಕಲಿ ನಂಬರ್ ಪ್ಲೇಟ್ ಹಾಕಿ ಕೃತ್ಯವೆಸಗುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.  ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಡಿಸಿಪಿ ಡಾ.ಎಸ್.ಡಿ ಶರಣಪ್ಪ ಉಪಸ್ಥಿತರಿದ್ದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ