ನೋವು ತಾಳದೆ ಮಹಿಳೆ ಆತ್ಮ ಹತ್ಯೆ !

Kannada News

13-10-2017

ಬೆಂಗಳೂರು: ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದೊಡ್ಡಕಲ್ಲಸಂದ್ರದಲ್ಲಿ ನಡೆದಿದೆ.

ದೊಡ್ಡಕಲ್ಲಸಂದ್ರದ ಮಹೇಶ್ವರಿ ದೇವಸ್ಥಾನದ ಬಳಿಯ ಮಂಜುಳ (45) ಆತ್ಮಹತ್ಯೆ ಮಾಡಿಕೊಂಡವರು. ಗರ್ಭಕೋಶದ ತೊಂದರೆಯಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಮಂಜುಳ ಅವರು, ಹೆಚ್ಚಿನ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು, ಪ್ರಕರಣ ದಾಖಲಿಸಿರುವ ಕೋಣನಕುಂಟೆ ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಶಿವಾಜಿನಗರದ ಸುಲ್ತಾನ್ ಷಾ ಮಸೀದಿ ಬಳಿ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ಚಂದ್ರಮೌಳಿ ಎಂಬಾತ ಕುಸಿದುಬಿದ್ದು, ಸಾವನ್ನಪ್ಪಿದ್ದಾನೆ. ಶಿವಾಜಿನಗರದ ಚಂದ್ರಮೌಳಿ ಕುಡಿದು ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ