ಕಳ್ಳರಿಂದ 11 ಲಕ್ಷ ಮೌಲ್ಯದ ಮಾಲು ವಶ !

Kannada News

13-10-2017

ಬೆಂಗಳೂರು: ದರೋಡೆ, ಸುಲಿಗೆ, ಸರಗಳ್ಳತನ, ವಾಹನ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ರಾಜಗೋಪಾಲನಗರ ಪೊಲೀಸರು, 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೆರೆಹಳ್ಳಿಯ ವಿಜಯ್ ಅಲಿಯಾಸ್ ಗೊಣ್ಣೆ (21), ಗಿರಿನಗರ ರೇಣು ಕುಮಾರ್ ಅಲಿಯಾಸ್ ಟಾಂಗು (22) ಹಾಗೂ ರಾಜಗೋಪಾಲನಗರದ ರಾಜು ಅಲಿಯಾಸ್ ಕರಿಯ (20) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 10 ಲಕ್ಷ ಮೌಲ್ಯದ ಚಿನ್ನಾಭರಣಗಳು 8 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ

ತಮಿಳುನಾಡು ಮೂಲದ ಆರೋಪಿಗಳಾದ ವಿಜಯ್ ಹಾಗೂ ರೇಣು ಕುಮಾರ್ ನಿಂದ 6.5 ಲಕ್ಷ ರೂ. ಮೌಲ್ಯದ 210ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದ ನಂತರ, ಒಂಟಿ ಮಹಿಳೆಯರ ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದರು.

ಆರೋಪಿಗಳ ಬಂಧನದಿಂದ ಮಾದನಾಯಕಹಳ್ಳಿಯ 2, ಬೆಳ್ಳಂದೂರು, ಗಿರಿನಗರ, ತಲಘಟ್ಟಪುರದ ತಲಾ ಒಂದು ಸೇರಿ, 5 ಸರಗಳವು ಹಾಗೂ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ.

ಮತ್ತೊಬ್ಬ ಆರೋಪಿ ರಾಜುವಿನಿಂದ 4.5 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಸಹಚರರಾದ ವೆಂಕಟೇಶ್, ಆನಂದ್, ರಮೇಶ್, ಮೆಂಟಲ್ ಮಂಜ, ಎಂಬಾತರ ಜೊತೆ ಸೇರಿ ಒಂಟಿಯಾಗಿ ಓಡಾಡುವ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದನಲ್ಲದೆ, ಬೈಕ್ ಗಳ ಹ್ಯಾಂಡಲ್ ಮುರಿದು ಕಳವು ಮಾಡುತ್ತಿದ್ದ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ದರೋಡೆ ಸುಲಿಗೆ ಸರಗಳ್ಳತನ ಬಂಧನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ