ಲಿಂಗಾಯತ-ವೀರಶೈವ ಮತ್ತು ಬ್ರಾಹ್ಮಣ….!

Kannada News

13-10-2017

ಲಿಂಗಾಯತ-ವೀರಶೈವ ಧರ್ಮ ಕದನಕ್ಕೆ ಹೊಸ ಹೊಸ ಆಯಾಮಗಳು ಸಿಗುತ್ತಿದ್ದು, ಚುನಾವಣೆ ಬೆನ್ನಲ್ಲಿದ್ದು ಹೊತ್ತಿ ಉರಿಯುವ ಹಂತ ತಲುಪಿದರೂ ಅಚ್ಚರಿ ಪಡುವಂತಿಲ್ಲ. ಲಿಂಗಾಯತ ಸಮುದಾಯದವರನ್ನು, ಆಂಗ್ಲರ ಕಾಲದಲ್ಲಿ ಬ್ರಾಹ್ಮಣ ವರ್ಗದವರು ಅನ್ಯರು ಎಂದು ಗುರುತಿಸುವಂತೆ ಮಾಡಿದ್ದರು ಮತ್ತು ವೀರಶೈವ-ಲಿಂಗಾಯತರನ್ನು ಪ್ರತ್ಯೇಕ ಮಾಡಿದರು ಎಂದು, ಪ್ರತ್ಯೇಕ ಲಿಂಗಾಯತ ಧರ್ಮದ ಪರ ಮುಂಚೂಣಿಯಲ್ಲಿ ನಿಂತಿರುವ ಎಸ್.ಎಂ.ಜಾಮದಾರ್ ಹೇಳಿದ್ದಾರೆ. ಇದರಿಂದಾಗಿ, ಬ್ರಾಹ್ಮಣ ಸಮುದಾಯದವರು ಎಲ್ಲದಕ್ಕೂ ನಮ್ಮ ಸಮುದಾಯವನ್ನೇ ಎಳೆದು ತರುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ, ಲಿಂಗಾಯತ ಧರ್ಮದ ಪರವಿರುವವರು, ಪಂಚಪೀಠಾಧೀಶರ ವಿರುದ್ಧ ಪತ್ರಿಕೆಗಳಲ್ಲಿ ಜಾಹೀರಾತು ಕೊಡುತ್ತಿದ್ದಾರೆ. ಇದೆಲ್ಲದರ ಪರಿಣಾಮವಾಗಿ ವೀರಶೈವ-ಲಿಂಗಾಯತರ ನಡುವಿನ ವಿವಾದ ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳುತ್ತಿರುವ ಸಭೆಗಳಲ್ಲೂ ಪರಸ್ಪರ ಕಿತ್ತಾಟ-ಗದ್ದಲಗಳು ಏಳುತ್ತಿವೆ..

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವಾಗ ಈ ಧರ್ಮದ ವಿಚಾರ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಪಕ್ಷಗಳು ಇದೇ ಒಡಕನ್ನು ಮುಂಡಿಟ್ಟುಕೊಂಡು ಲಾಭ ಮಾಡಿಕೊಳ್ಳಲು ಮುಂದಾಗಿವೆ. ಇಲ್ಲಿ ಅಡಕತ್ತರಿಯಲ್ಲಿ ಸಿಕ್ಕುವುದು ಬಿಜೆಪಿಯೇ ಅನ್ನುವಂತಾಗಿದ್ದು, ಲಾಭ ಮಾಡಿಕೊಳ್ಳುವುದು ಕಾಂಗ್ರೆಸ್ ಎಂಬುದನ್ನು ತಳ್ಳಿಹಾಕುವಂತಿಲ್ಲ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ