ಬಿಜೆಪಿ ಬಾಗಿಲಿಗೆ ಕೆಎಸ್ಒಯು ಸಿಬ್ಬಂದಿ-ವಿದ್ಯಾರ್ಥಿಗಳು !

Kannada News

13-10-2017 429

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಮಸ್ಯೆಗಳ ಕುರಿತು ಅಧ್ಯಯನಕ್ಕೆ ತಂಡ ರಚನೆ ಮಾಡಲಾಗಿದೆ. ಉನ್ನತ ಮಟ್ಟದ ತನಿಖಾ ತಂಡ ರಚಿಸಲಾಗಿದ್ದು, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಮೈಸೂರಿನಿಂದ ಬಸ್ ಮಾಡಿಕೊಂಡು ಸಚಿವರನ್ನು ಭೇಟಿ ಮಾಡಲು ಬೆಂಗಳೂರಿಗೆ  ತೆರಳಿದ್ದಾರೆ.

ಅಲ್ಲದೇ ರಾಜ್ಯಾದ್ಯಂತ ಬೆಂಗಳೂರಿಗೆ ಕೆಎಸ್ಒಯು ವಿದ್ಯಾರ್ಥಿಗಳು ಹೊರಟಿದ್ದಾರೆ. ನಿನ್ನೆ ಸಂಜೆ ಪ್ರಕಟವಾಗಿರುವ ನಿರ್ಧಾರದಿಂದ ನೌಕರರಲ್ಲಿ ಆತಂಕ ಹೆಚ್ಚಿದ್ದು, ಬೋಧಕ, ಬೋಧಕೇತರ, ಗುತ್ತಿಗೆ, ಅರೆ ಗುತ್ತಿಗೆ ನೌಕರರು ಬೆಂಗಳೂರಿಗೆ ಹೊರಟಿದ್ದಾರೆ. ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಬೆಂಗಳೂರಿನ ಬಿಜೆಪಿ‌ ಕಚೇರಿಗೆ ಆಗಮಿಸಲಿದ್ದು, ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ. ಈ ತಂಡ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಮಾನ್ಯತೆ ನವೀಕರಣ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ