ಕಿಡ್ನಾಪರ್ ಮೇಲೆ ಫೈರಿಂಗ್ !

Kannada News

13-10-2017

ಬೆಂಗಳೂರು: ಕಿಡ್ನಾಪರ್ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ. ಬಾಗಲೂರು ಕ್ರಾಸ್ ಬಳಿ ನೂರುಲ್ಲಾ ಎಂಬುವವನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.  ನೂರುಲ್ಲಾ ಎಂಬುವರ ಜೊತೆ ಸೇರಿ ಮೂವರು, ಮಗು ಒಂದನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಅಪಹರಣಾಕಾರರ ಬೆನ್ನತ್ತಿದ ಪೊಲೀಸರು, ಇಂದು ಬೆಳಿಗ್ಗೆ ಬಾಗಲೂರು ಲೇಔಟ್ ಬಳಿ ಆರೋಪಿಗಳ ಇರುವಿಕೆ ಬಗ್ಗೆ, ಖಚಿತ ಮಾಹಿತಿ ದೊರೆತಿದ್ದು, ಕೊತ್ತನೂರು ಇನ್ಸ್ ಪೆಕ್ಟರ್ ಹರಿಯಪ್ಪ ನೇತೃತ್ವದ ತಂಡ ಅಪಹರಣಾಕಾರರನ್ನು ಹಿಡಿಯಲು ಮುಂದಾಗಿದ್ದರು.

ಈ ವೇಳೆ ನೂರುಲ್ಲಾ ಎಂಬಾತ ಅಬ್ದುಲ್ ಹಮೀದ್ ಎಂಬ ಮುಖ್ಯಪೇದೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಮುಂದಾನು, ಇನ್ನು ಆತ್ಮರಕ್ಷಣೆಗಾಗಿ ಇನ್ಸ್‌ ಪೆಕ್ಟರ್ ಹರಿಯಪ್ಪ ಆರೋಪಿ ನೂರುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗಳು ಮುಸ್ಲಿಂ ದಂಪತಿಯ ಮಗುವೊಂದನ್ನು ಕಿಡ್ನಾಪ್ ಮಾಡಿದ್ದರು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ