ಮಾಂಗಲ್ಯಸರ ಕಸಿದ ದುಷ್ಕರ್ಮಿಗಳು !

Kannada News

12-10-2017

ಬೆಂಗಳೂರು: ಬಸವೇಶ್ವರ ನಗರದ ಮಂಜುನಾಥನಗರದಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ಮಹಿಳೆಯೊಬ್ಬರ ಮಾಂಗಲ್ಯಸರವನ್ನು ಬೈಕ್‍ ನಲ್ಲಿ ಬಂದ, ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ದುರ್ಘಟನೆ ನಡೆದಿದೆ.

ಮಂಜುನಾಥನಗರದ 4ನೇ ಮುಖ್ಯರಸ್ತೆಯಲ್ಲಿ, ಇಂದು ಬೆಳಿಗ್ಗೆ 7ರ ವೇಳೆ ವಾಯುವಿಹಾರ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ಸತ್ಯಭಾಮ (65) ಅವರ, ಕತ್ತಿನಲ್ಲಿದ್ದ 48 ಗ್ರಾಂ. ತೂಕದ ಮಾಂಗಲ್ಯ ಸರವನ್ನು ಬೈಕ್‍ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಬಸವೇಶ್ವರ ನಗರ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ