ಚಿನ್ನಮ್ಮ ಜೈಲಿಗೆ ವಾಪಸ್ !

Kannada News

12-10-2017 219

ಬೆಂಗಳೂರು: ಅನಾರೋಗ್ಯಕ್ಕೊಳಗಾಗಿರುವ ಪತಿ ನಟರಾಜನ್ ಯೋಗಕ್ಷೇಮ ವಿಚಾರಿಸಲು ಪೆರೋಲ್ ಪಡೆದು ಚೆನ್ನೈಗೆ ಹೋಗಿದ್ದ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಇಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಪತಿಯ ಆನಾರೋಗ್ಯದ ನಿಮಿತ್ತ ಐದು ದಿನಗಳ ಕಾಲ ಷರುತ್ತುಬದ್ಧ ಪೆರೋಲ್ ಪಡೆದು ಶಶಿಕಲಾ ನಟರಾಜನ್ ಚೆನ್ನೈಗೆ ತೆರಳಿದ್ದರು. ಇಂದಿಗೆ ಅವರ ಪೆರೋಲ್ ಅವಧಿ ಪೂರ್ಣಗೊಂಡಿದ್ದು ಮರಳಿ ಪರಪ್ಪನ ಅಗ್ರಹಾರ ಜೈಲಿಗೆ ವಾಪಸ್ಸಾಗಿದ್ದಾರೆ. ಬೆಳಗ್ಗೆ 8.30 ಕ್ಕೆ ಚೆನ್ನೈನಿಂದ ಕಾರಿನಲ್ಲಿ ಹೊರಟ ಶಶಿಕಲಾ ನಟರಾಜನ್, ಮಧ್ಯಾಹ್ನದ ವೇಳೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದರು.

 

 

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ