ರೈತನನ್ನು ಕೊಂದ ಕರಡಿ !

Kannada News

12-10-2017

ಬೆಂಗಳೂರು: ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತರೊಬ್ಬರು ಮೃತಪಟ್ಟಿರುವ ಘಟನೆ, ಗೌರಿಬಿದನೂರಿನ ರಾಯನಕಲ್ಲುವಿನಲ್ಲಿ ನಡೆದಿದೆ. ರಾಯನಕಲ್ಲುವಿನ ರೈತ ಕೇಶವಮೂರ್ತಿ (45)ಎಂದು ಮೃತ ರೈತನನ್ನು ಗುರುತಿಸಲಾಗಿದೆ. ತೋಟದಲ್ಲಿ ನೀರು ಹಾಯಿಸುವಾಗ, ಪಕ್ಕದ ಪ್ರದೇಶದಿಂದ ಬಂದಿದ್ದ ಕರಡಿ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ಕೇಶವಮೂರ್ತಿಯನ್ನು ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿದ ಸ್ಥಳೀಯರು ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬಾರದಿದ್ದಾಗ, ಆಟೋದಲ್ಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಗಾಯಗೊಂಡ ಕೇಶವಮೂರ್ತಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲು ಮುಂದಾಗುವ ವೇಳೆಗಾಗಲೇ ರೈತ ಮೃತಪಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ