ತಾಯಿಯನ್ನು ಬಲಿ ಪಡೆದ ಮಗನ ಸಾವು !

Kannada News

12-10-2017

ಕಲಬುರಗಿ: ಮಗನ ಸಾವಿನ ಸುದ್ದಿ ತಿಳಿದು ತಾಯಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ ಕಲಬುರಗಿಯ ಸುಲ್ತಾನಪುರದಲ್ಲಿ ನಡೆದಿದೆ.

ಈ ಹಿಂದೆ ಹಣಕ್ಕಾಗಿ ಕಿಡ್ನಾಪ್​ ಮಾಡಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಮಾಡಲಾಗಿತ್ತು. ಸೈಯದ್ ಚಿಂಚೋಳಿ-ನರೋಣ ಮಾರ್ಗ ಮಧ್ಯೆ ಶವ ಪತ್ತೆಯಾಗಿ ಅದು ಸುಲ್ತಾನಪುರ ನಿವಾಸಿ ಮೊನಪ್ಪ(42) ಎಂದು ಪತ್ತೆಯಾದ ಹಿನ್ನೆಲೆ ಮಗನ ಸಾವಿನ ಸುದ್ದಿ ತಿಳಿದು ಮೊನಪ್ಪ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅಕ್ಟೋಬರ್​.7ರಂದು ಮೊನಪ್ಪನನ್ನು ದುಷ್ಕರ್ಮಿಗಳು ಕಿಡ್ನಾಪ್​ ಮಾಡಿದ್ದರು. ಅಲ್ಲದೆ ದುಷ್ಕರ್ಮಿಗಳು ಕುಟುಂಬಸ್ಥರಿಂದ 6 ಲಕ್ಷ ಹಣ ಪಡೆದಿದ್ದರು. ಬಳಿಕ ಕೊಲೆ ಮಾಡಿ ಕಲಬುರಗಿ ತಾಲ್ಲೂಕಿನ ಸೈಯದ್ ಚಿಂಚೋಳಿ-ನರೋಣ ಮಾರ್ಗ ಮಧ್ಯೆ ಬೀಸಾಡಿದ್ದಾರೆ. ಕೊಲೆಯಾದ ಮೊನಪ್ಪ ಜೆಸ್ಕಾಂನಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ