‘ಮೋದಿಗೆ ಕಾದಿದೆ ಗಂಡಾಂತರ’

Kannada News

12-10-2017

ಹಾಸನ: ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ. ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೋದಿ ಅವರದ್ದು ವೃಶ್ಚಿಕ ರಾಶಿ,  ಅವರಿಗೆ ಶನಿ ಚೆನ್ನಾಗಿಲ್ಲ. ಈಗ ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿದ್ದು ಯಶೋಕೀರ್ತಿ ಹೊಂದಿರುವ ಸಿನಿಮಾ ಸ್ಟಾರ್ ಅಥವಾ ರಾಜಕಾರಣಿಗೆ ಘೋರ ಅಪಮೃತ್ಯು ಕಾದಿದೆ ಎಂದಿದ್ದಾರೆ.

ತಾಯಿಯಿಂದ, ಪತ್ನಿಯಿಂದ ದೂರ ಇರುವ ಪ್ರಧಾನಿಗೆ ಶುಕ್ರನಿಂದಲೂ ದೋಷ ಇದೆ. ಅವರನ್ನು ಹೆಣ್ಣೊಬ್ಬಳು ಮೋಹಿಸಲಿದ್ದಾಳೆ. ಮೋದಿಗೆ ಇದೇ ಮುಳುವಾಗಲಿದೆ. ಗಾಂಧಿ ಕುಟುಂಬಕ್ಕೆ ಇಲ್ಲವೇ ಮೋದಿಗೆ ಸಾವು ಸಾವಿರ ಪರ್ಸೆಂಟ್ ಖಚಿತ ಎಂದರು. ಈ ಗಂಡಾಂತರದಿಂದ ಪಾರಾಗಬೇಕಾದ್ರೆ ದಕ್ಷಿಣದ 6 ಕ್ಷೇತ್ರಗಳ ಸುಬ್ರಹ್ಮಣ್ಯ ದೇವರನ್ನು ಆರಾಧಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ನಾನೇ ಎಲ್ಲಾ ಅನ್ನೋ ಹಿಟ್ಲರ್ ಮನೋಧೋರಣೆಯನ್ನು ಮೋದಿ ಅವರು ಬಿಟ್ಟರೆ ಒಳ್ಳೆಯದು ಎಂದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬೆರಕೆ ಸರಕಾರ ಬರಲಿದೆ ಎಂದು ಭವಿಷ್ಯ ನುಡಿದ ಗುರೂಜಿ, ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಆಗುವುದರ ಜೊತೆಗೆ ಕಿಂಗ್'ಮೇಕರ್ ಆಗಲಿದ್ದಾರೆ. ಆದರೆ ಅವರು ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡು, ತಂದೆ ದೇವೇಗೌಡರ ಮಾತನ್ನು ಚಾಚೂತಪ್ಪದೆ ಕೇಳಬೇಕು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


From people like this,our nation and citizen loosing confidence of there own. Nothing scientifically come by them. Even media not care of it. Unless we kick out this kind of fellow our country con"t develop
  • ದಯಾನಂದ ಬೀರೂರು
  • ಗುರು