‘ಶುದ್ಧ ಗಾಳಿ’ ಮಾರುವ ಚೀನೀ ಬೆಡಗಿಯರು..!

Kannada News

12-10-2017

ನೀವು ಹೂ ಮಾರುವ ಹುಡುಗಿಯರನ್ನು ನೋಡಿರಬಹುದು, ಹಾಲು ಮಾರುವವರನ್ನೂ ಕಂಡಿರಬಹುದು, ಆದರೆ, ಪ್ರಾಣವಾಯು ಅದೇ ಸ್ವಾಮಿ, ತಾಜಾ ಗಾಳಿ ಮಾರುವವರನ್ನೇನಾದರೂ ಕಂಡಿದ್ದೀರಾ? ಇಲ್ಲಾ ತಾನೆ? ಇಲ್ಲಿ ನೋಡಿ, ಚೀನಾದ ಕ್ವಿಂಗಾಯ್ ಪ್ರಾಂತ್ಯದ ಕ್ಷಿನಿಂಗ್ ನಗರದ ಈ ಸೋದರಿಯರು, ತಾಜಾ ಗಾಳಿ ಮಾರಿ ಹಣ ಮಾಡುತ್ತಿದ್ದಾರೆ. ಗಾಳಿ ಯಾರದು ಅಂದ್ರಾ? ಛೇ ಬಿಡಿ ಸ್ವಾಮಿ ಅದಲ್ಲ. ಇವರು ಮಾರುತ್ತಿರುವ ಗಾಳಿ, ನಿಸರ್ಗದತ್ತವಾದ ಟಿಬೆಟ್ಟಿನ ಬೆಟ್ಚಗಳು ಮತ್ತು ಕಣಿವೆಗಳಿಂದ ಸಂಗ್ರಹಿಸಿದ ಶುದ್ಧ ಗಾಳಿ. ಒಂದು ಚೀಲ ಗಾಳಿಗೆ 15 ಯುವಾನ್ ಅಂದ್ರೆ ಸುಮಾರು 150 ರೂಪಾಯಿಗಳು.

ನಿಮಗೆ, ಬೆಟ್ಟಗಳ ಮೇಲಿನ ಗಾಳಿ ಬೇಕೋ ಅಥವ ಕಣಿವೆಗಳಿಂದ ತುಂಬಿಸಿಕೊಂಡು ಬಂದ ಗಾಳಿ ಬೇಕೋ? ಎಂದು ಕೇಳುವ ಈ ಲಲನೆಯರು ಈಗಾಗಲೇ ನೂರಕ್ಕೂ ಹೆಚ್ಚು ಗಾಳಿ ಚೀಲಗಳನ್ನು ಮಾರಾಟ ಮಾಡಿದ್ದಾರಂತೆ.

ನಾವು ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹೀಗೆ ಮಾಡುತ್ತಿದ್ದೇವೆ ಎಂದು ಹೇಳುವ ಇವರು, ಗಾಳಿ ಸಂಗ್ರಹಿಸಲು ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ