ಮೊಬೈಲ್ ಅಂಗಡಿಯಲ್ಲಿ ನೋಟು ಪ್ರಿಂಟಿಂಗ್ !

Kannada News

12-10-2017

ಚಿತ್ರದುರ್ಗ: ಎರಡು ಸಾವಿರ ಮುಖ ಬೆಲೆಯ ನೋಟು ಮುದ್ರಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ. ನಗರದ ತಾಜ್ ಮೊಬೈಲ್ ಸೆಂಟರ್ ನಲ್ಲಿ ಈ ಕೃತ್ಯ ನಡೆಸುತ್ತಿದ್ದರು. ಬಂಧಿತರಾದ ಹೊಳಲ್ಕೆರೆ ಟಿಪ್ಪುನಗರ ನಿವಾಸಿ ಸೈಯದ್ ತೌಸಿಫ್ (26), ವೆಂಕಟೇಶ್ವರ ನಗರ ನಿವಾಸಿ ಮೊಹಮದ್ ಜುಬೇರ್ (20), ಮೊಹಮದ್ ಅಪ್ತಾಬ್ (20), ಹೊಳಲ್ಕೆರೆ ನಿವಾಸಿ ಮನ್ಸೂರ್ ಅಲಿ (20) ಎಂದು ಗುರುತಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ, ಇನ್ನೂ ಮೂರು ಮಂದಿ ಆರೋಪಿಗಳು ನಾಪತ್ತೆಯಾಗಿದ್ದು, ದಾವಣಗೆರೆ ಮೂಲದ ಮಹಮದ್ ಯೂಸೂಫ್, ಬೆಂಗಳೂರು ಮೂಲದ ಪ್ರಕಾಶ್ ಮತ್ತು ಮಹೇಶ್ ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಹೇಳಲಾಗಿದೆ.

ಬಂಧಿತರಿಂದ ಎರಡು ಸಾವಿರ ಮುಖಬೆಲೆಯ 64ನೋಟುಗಳು ಹಾಗೂ ನೋಟು ಮುದ್ರಣ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ