ಲೇಡೀಸ್ ಟಾಯ್ಲೆಟ್‌ ನಲ್ಲಿ ರಾಹುಲ್ ಗಾಂಧಿ !

Kannada News

12-10-2017

ತಮ್ಮ ಮಾತುಗಳು ಮತ್ತು ವರ್ತನೆಯಿಂದ ಆಗಾಗ ಟೀಕೆಗಳಿಗೆ ಮತ್ತು ಹಾಸ್ಯಕ್ಕೆ ಗುರಿಯಾಗುವ ಕಾಂಗ್ರೆಸ್ ಯುವರಾಜನಿಗೆ ಇದೊಂದು ಆಗಬಾರದಿತ್ತು ಆದರೂ ಆಗಿಬಿಟ್ಟಿದೆ.

ಯುವ ಜನರೊಡನೆ ವಿಚಾರ ವಿನಿಮಯ ನಡೆಸುವ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ‘ಸಂವಾದ್‘ ಕಾರ್ಯಕ್ರಮಕ್ಕಾಗಿ ಗುಜರಾತ್‌ ಭೇಟಿಯಲ್ಲಿರುವ ರಾಹುಲ್ ಗಾಂಧಿ, ಛೋಟೇ ಉದಯಪುರ್ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ಮುಗಿದ ಬಳಿಕ, ಅಲ್ಲೇ ಪಕ್ಕದಲ್ಲಿದ್ದ ಶೌಚಾಲಯಕ್ಕೆ ಹೋದರು. ಆದರೆ, ತಾವು ಎಂಟ್ರಿ ಕೊಟ್ಟಿದ್ದು ಮಹಿಳೆಯರ ಶೌಚಾಲಯಕ್ಕೆ ಅನ್ನುವುದು ಗೊತ್ತಾಗಿದ್ದು, ಅವರು ತಮ್ಮ ಎಸ್‌ಪಿಜಿ ಅಂಗರಕ್ಷಕರ ಜೊತೆ ವಾಪಸ್ ಹೊರಗೆ ಬಂದ ನಂತರವೇ. ಆ ಟಾಯ್ಲೆಟ್ ಹೊರಗೆ ಪುರುಷರು ಅಥವ ಮಹಿಳೆಯರು ಎಂದು ಸೂಚಿಸುವ ಚಿತ್ರವಾಗಲಿ ಅಥವ ಇಂಗ್ಲಿಷ್ ಭಾಷೆಯಲ್ಲಿ ಸೂಚನೆಯಾಗಲಿ ಇರಲಿಲ್ಲ. ಬದಲಿಗೆ ಗುಜರಾತಿ ಭಾಷೆಯಲ್ಲಿ ‘ಮಹಿಳಾವೊ ಮಾತೆ ಶೌಚಾಲಯ’ ಎಂದು ಬರೆದಿದ್ದ ಪೋಸ್ಟರ್ ಅಂಟಿಸಿದ್ದರು. ಆದರೆ, ರಾಹುಲ್ ಗಾಂಧಿಗೆ ಗುಜರಾತಿ ಭಾಷೆ ಓದಲು ಬರದೇ ಇದ್ದ ಕಾರಣ, ಅವರು ಟಾಯ್ಲೆಟ್ ಒಳಕ್ಕೆ ತೆರಳಿದ್ದರು.

ಆ ಟಾಯ್ಲೆಟ್‌ ನಿಂದ ರಾಹುಲ್ ಹೊರ ಬರುವಷ್ಟರಲ್ಲೇ, ಈ ಅಚಾತುರ್ಯದ ಸುದ್ದಿ ಎಲ್ಲೆಡೆ ಹಬ್ಬಿ, ಮಾಧ್ಯಮಗಳವರು ಕ್ಯಾಮರಾ ಹಿಡಿದು ನಿಂತಿದ್ದರು. ಆಗ ಎಸ್‌ಪಿಜಿ ಗಾರ್ಡ್‌ಗಳು ಮಾಧ್ಯಮದವರನ್ನು ಅಲ್ಲಿಂದ ಹೋಗಲು ಹೇಳಿದರು. ಆದರೆ, ಅಲ್ಲಿ ಸೇರಿದ್ದ ಜನರು ಘೊಳ್ ಎಂದು ನಗುವುದನ್ನಾಗಲಿ ಅಥವ ನ್ಯೂಸ್ ಚಾನಲ್ ಗಳ ವರದಿಗಾರರು ಈ ದೃಶ್ಯವನ್ನು ಸೆರೆಹಿಡಿಯುವುದನ್ನಾಗಲಿ ತಪ್ಪಿಸಲು, ರಾಹುಲ್ ಅಂಗರಕ್ಷಕರಿಗೆ ಸಾಧ್ಯವಾಗಲಿಲ್ಲ.  ಪಾಪ ರಾಹುಲ್ ಗಾಂಧಿಗೆ ಹೀಗಾಗಬಾರದಿತ್ತು…

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ