80 ಸಾವಿರ ನಕಲಿ ನೋಟು ವಶ !

Kannada News

12-10-2017

ಬೆಂಗಳೂರು: ನಕಲಿ ನೋಟುಗಳನ್ನು ಅಸಲಿ ನೋಟುಗಳೆಂದು ಸಾರ್ವಜನಿಕರಿಗೆ ನಂಬಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ, 83,500 ರೂ.ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊದಲಿಯಾರ್ ಸ್ಟ್ರೀಟ್ ನಿವಾಸಿ ಭಾಸ್ಕರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಮೊದಲಿಯಾರ್ ಸ್ಟ್ರೀಟ್ ಬದಿಯಲ್ಲಿ ಬಳಿ ಬಣ್ಣದ ಮಾರುತಿ ವ್ಯಾನ್ ವಾಹನದಲ್ಲಿ ಕುಳಿತು ನಕಲಿ ನೋಟುಗಳನ್ನು ಚಲಾವಣೆಗೆ ಪ್ರಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಆತನಿಂದ 2000 ರೂ.ಮುಖಬೆಲೆಯ 37 ನಕಲಿ ನೋಟು, 500 ರೂ. ಮುಖಬೆಲೆಯ 19 ನಕಲಿ ನೋಟು ಸೇರಿದಂತೆ ಒಟ್ಟು 83,500 ರೂ. ಮೌಲ್ಯದ ನಕಲಿ ನೋಟುಗಳು, ಕೃತ್ಯಕ್ಕೆ ಬಳಸಿದ ಒಂದು ಲಕ್ಷ ರೂ.ಮೌಲ್ಯದ ಒಂದು ಬಿಳಿ ಮಾರುತಿ ವ್ಯಾನ್ ವಶಪಡಿಸಿಕೊಳ್ಳಲಾಗಿದೆ. ತನ್ನ ಕಾರಿನಲ್ಲಿ ಪ್ರೆಸ್ ವಾಹನ ಎಂದು ಬರೆಸಿಕೊಂಡಿದ್ದ. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು 80 ಸಾವಿರ ನಕಲಿ ನೋಟು ವಶ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ