ಹಾಸನಾಂಬೆ ದರ್ಶನಕ್ಕೆ ಇಂದು ಅವಕಾಶವಿಲ್ಲ !

Kannada News

12-10-2017

ಹಾಸನ: ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಇಂದು ತೆರೆಯಲಾಗುತ್ತದೆ. ಅಧಿದೇವತೆ ಹಾಸನಾಂಬೆ ದರ್ಶನಾರಂಭಕ್ಕೆ ಲಕ್ಷಾಂತರ ಮಂದಿ ಆಗಮಿಸುವ ‌ನಿರೀಕ್ಷೆ ಇದ್ದು,  ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಿಂದೂ ಪಂಚಾಂಗದ ಆಶ್ವೀಜ ಮಾಸದ ಹುಣ್ಣಿಮೆ ನಂತರದ ಮೊದಲ ಗುರುವಾರ ಬಾಗಿಲು ತೆಗೆಯುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಅದೇ ರೀತಿ ಮೈಸೂರು ತಳವಾರ ವಂಶಸ್ಥ ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆಗೆಯಲಾಗುವುದು. ಇಂದು ಮದ್ಯಾಹ್ನ 12:30ಕ್ಕೆ ಆರ್ದ ನಕ್ಷತ್ರ ಸಮಯದಲ್ಲಿ ಗರ್ಭ ಗುಡಿ ಬಾಗಿಲು ತೆಗೆಯಲು ಸಕಲ ಸಿದ್ದತೆ ಮಾಡಲಾಗಿದೆ.  ಪಂಚಾಗದ ಪ್ರಕಾರ ಇಂದಿನಿಂದ ಬಲಿ ಪಾಡ್ಯಮಿಯ ಮಾರನೆ ದಿನದವರೆಗೆ ದರ್ಶನ ಭಾಗ್ಯ ಲಭಿಸಲಿದ್ದು ಲಕ್ಷಾಂತರ ಮಂದಿ ದರ್ಶನ ಪಡೆಯುವ ನಿರೀಕ್ಷೆ ಇದೆ. ಇಂದಿನಿಂದ ಅಕ್ಟೋಬರ್ 21ರವರೆಗೆ ಹಾಸನಾಂಬೆಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ. ಆದರೆ ಇಂದು ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಇರುವುದಿಲ್ಲ. ಈ ಬಾರಿ ದಿನದ 24ಗಂಟೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬಾಗಿಲು ತೆಗೆದ ನಂತರ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ಕಾರ್ಯಗಳು ನೆರವೇರಲಿದ್ದು, ನಾಳೆ ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆಯ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ