ಮಧ್ಯರಾತ್ರಿ ಕಾರುಗಳ ಗಾಜು ಪುಡಿ-ಪುಡಿ !

Kannada News

11-10-2017

ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 7 ಕಾರುಗಳ ಗಾಜುಗಳನ್ನು ನಿನ್ನೆ ಮಧ್ಯರಾತ್ರಿ, ದುಷ್ಕರ್ಮಿಗಳು ಒಡೆದು, ಹಾನಿಗೊಳಿಸಿ, ಪರಾರಿಯಾಗಿರುವ ಘಟನೆ ತ್ಯಾಗರಾಜನಗರದಲ್ಲಿ ನಡೆದಿದೆ. ತ್ಯಾಗರಾಜ ನಗರದ 6ನೇ ಮುಖ್ಯರಸ್ತೆಯ ದತ್ತಾತ್ರೇಯ ದೇವಸ್ಥಾನ ಬಳಿ ನಿಲ್ಲಿಸಿದ್ದ ಕಾರುಗಳಿಗೆ ಇಬ್ಬರು ದುಷ್ಕರ್ಮಿಗಳು ರಾತ್ರಿ 1ರ ಸುಮಾರಿನಲ್ಲಿ 7 ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ.

ಕಾರುಗಳ ಕಿಟಕಿ ಗಾಜುಗಳು ಒಡೆದಿದ್ದು, ಹಾನಿ ಸಂಭವಿಸಿದೆ. ಬಸವನಗುಡಿಯಲ್ಲೂ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಸಂಬಂಧ ಕಾರಿನ ಮಾಲೀಕರಾದ ಮಂಜುನಾಥ್, ಶ್ರೀನಿವಾಸಮೂರ್ತಿ,ಲೋಕೇಶ್, ಮೋಹನ್ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ