ಮೂರೇ ತಿಂಗಳಲ್ಲಿ ಚುನಾವಣೆ..?

Kannada News

11-10-2017

ಬೆಂಗಳೂರು: ಇನ್ನು ಎರಡು ಮೂರು ತಿಂಗಳಲ್ಲಿ ಚುನಾವಣೆ ಎದುರಾದರೂ ಆಗಬಹುದು, ಅದಕ್ಕೆ ಕಾರ್ಯಕರ್ತರು ಸಿದ್ದರಾಗಿರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಜೆಪಿ ಭವನದಲ್ಲಿ ನಡೆದ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು,  ಮಾರ್ಚ್‍ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಬರುವುದರಿಂದ ಜನವರಿಯಲ್ಲೇ ಚುನಾವಣೆಗಳು ನಡೆಯಬಹುದು. ಆದರೆ ಚುನಾವಣಾ ಆಯೋಗ ನಮಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಹೇಳುತ್ತಿದೆ ಎಂದರು. ಪ್ರಧಾನಿಯ ‘ಮನ್ ಕಿ ಬಾತ್’ ಬದಲು ‘ಕಾಮ್ ಕಿ ಬಾತ್’ ಆರಂಭಿಸಿರುವ ಸಿದ್ದರಾಮಯ್ಯ ನವ ಕರ್ನಾಟಕ ನಿರ್ಮಾಣಕ್ಕೆ ಹೊರಟಿದ್ದಾರೆ. ಅವರಲ್ಲಿ ಹಣವಿದೆ, ನಮ್ಮಲ್ಲಿ ಹಣವಿಲ್ಲ. ಅಭ್ಯರ್ಥಿಗಳು ತಮ್ಮ ಸ್ವಂತ ಬಲದ ಮೇಲೆ ಸ್ಪರ್ಧಿಸಿ ಗೆಲ್ಲಬೇಕಾಗುತ್ತದೆ ಎಂದರು.

ನಾನು ಪ್ರಧಾನಿಯಾಗಿದ್ದಾಗ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಸಾಧನೆಗಳೇ ನಮಗೆ ಶ್ರೀರಕ್ಷೆ ಆದ್ದರಿಂದ ಮನೆ ಮನೆಗೆ ಕುಮಾರಣ್ಣ ಎಂಬ ಜೆಡಿಎಸ್ ಕಾರ್ಯಕ್ರಮವನ್ನು ಒಂದು ತಿಂಗಳಲ್ಲಿ ಇಡೀ ರಾಜ್ಯದ ಜನತೆಗೆ ತಲುಪಿಸಬೇಕು ಎಂದು ಅವರು ಹೇಳಿದರು. ನವೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರಲಿದ್ದಾರೆ. ಅವರ ಪಕ್ಷದ ಕಾರ್ಯಕರ್ತರ ದ್ವಿಚಕ್ರ ವಾಹನ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ