ರಷ್ಯಾದ ಬಿಕ್ಷುಕನಿಗೆ ಸುಷ್ಮಾ ರಕ್ಷೆ….!

Kannada News

11-10-2017

ಇವನು ಬಡವನಲ್ಲ, ಅಥವ ಬಡವನೆಂಬ ನಾಟಕವನ್ನೂ ಆಡುತ್ತಿಲ್ಲ, ಆದರೆ ದೇವಸ್ಥಾನವೊಂದರ ಎದುರು ಕುಳಿತು ಬಿಕ್ಷೆ ಬೇಡುತ್ತಿರುವ ಇವನು ಭಾರತೀಯನೂ ಅಲ್ಲ. ಇವನೇನು ಬಿಕ್ಷೆ ಬೇಡುವವರ ಬದುಕನ್ನು ಪರಿಚಯ ಮಾಡಿಕೊಳ್ಳಲು ಹೊರಟಿದ್ದಾನೆಯೇ ಅಂದರೆ, ಅದೂ ಅಲ್ಲ. ವಿಚಾರ ಏನಪ್ಪಾ ಅಂದ್ರೆ, ಈ ವ್ಯಕ್ತಿ ರಷ್ಯಾ ದೇಶದವನು, ಇವನ ಹೆಸರು ಎ.ಇವಾಂಜೆಲಿನ್, ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾನೆ. ಚೆನ್ನೈಗೆ ಬಂದಿಳಿದ ಇವನು ಅಲ್ಲಿ ಇಲ್ಲಿ ತಿರುಗಾಡುತ್ತಾ ಕಾಂಚೀಪುರಕ್ಕೆ ಬಂದ, ಅಲ್ಲಿನ ದೇಗುಲಗಳಿಗೆ ಭೇಟಿ ಕೊಟ್ಟ, ಜೇಬಿನಲ್ಲಿದ್ದ ಹಣ ಖರ್ಚು ಮಾಡಿಕೊಂಡ. ಆದರೆ, ಇವನ ಬಳಿ ಎಟಿಎಮ್ ಕಾರ್ಡ್ ಇತ್ತು, ಅಕೌಂಟಿನಲ್ಲಿ ಹಣವೂ ಇತ್ತು, ಆದ್ದರಿಂದ ಹತ್ತಿರದ ಎಟಿಎಮ್‌ಗೆ ಹೋಗಿ ಹಣ ಡ್ರಾ ಮಾಡಲು ಪ್ರಯತ್ನಿಸಿದ, ಅಗಲಿಲ್ಲ, ಮತ್ತೊಂದು ಬ್ಯಾಂಕ್ ಎಟಿಮ್‌ ಟ್ರೈಮಾಡಿದ ಅಲ್ಲೂ ಸಿಗಲಿಲ್ಲ. ಹೀಗೆ ಹಲವು ಕಡೆ ಪ್ರಯತ್ನಿಸಿದ ಇವನು ಹಣ ಪಡೆಯಲು ವಿಫಲನಾದ. ಅಷ್ಟು ಹೊತ್ತಿಗೆ, ಹೊಟ್ಟೆ ಬೇರೆ ಹಸಿಯಲು ಶುರುವಾಯಿತೇನೋ ಗೊತ್ತಿಲ್ಲ. ಮತ್ತೆನೂ ದಾರಿಯಿಲ್ಲದೆ ತಲೆ ಮೇಲಿನ ಟೋಪಿ ತೆಗೆದು ಕೈಯಲ್ಲಿ ಹಿಡಿದ, ದೇವಸ್ಥಾನದ ಎದುರಲ್ಲಿ ಬಿಕ್ಷುಕನಂತೆ ಕುಳಿತ. ಒಂದಿಷ್ಟು ಕಾಸು ಸಿಕ್ಕಿತ್ತೋ ಇಲ್ಲವೋ ಗೊತ್ತಿಲ್ಲ, ವಿದೇಶಿಯನೊಬ್ಬ ಬಿಕ್ಷೆ ಬೇಡುತ್ತಿರುವುದು ಅಲ್ಲಿನ ಪೊಲೀಸರಿಗೆ ಗೊತ್ತಾಗಿ, ಅವರು ಇವನ ಬಳಿ ಬಂದರು, ಒಂದಿಷ್ಟು ಹಣ ಕೊಟ್ಟು ಚೆನ್ನೈಗೆ ವಾಪಸ್ ಕಳಿಸಿದರು. ಈ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಿವಿಗೆ ಬಿದ್ದಿದ್ದೇ ತಡ. ಅವರು ’ ರಷ್ಯಾ, ಹಿಂದಿನಿಂದಲೂ ನಮ್ಮ ಮಿತ್ರ ದೇಶ, ಚೆನ್ನೈನಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ಎಲ್ಲಾ ಸಹಾಯ ಮಾಡುತ್ತಾರೆ’ ಎಂದು  ಟ್ವೀಟ್ ಮಾಡಿದರು, ಇವಾಂಜೆಲಿನ್ ಪಾಲಿಗೆ ಏಂಜೆಲ್ ಆದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ