ಪ್ರಚಾರ ಸಮಿತಿ ಬಿಎಸ್‌ವೈ ಹೆಗಲಿಗೆ !

Kannada News

11-10-2017

ಬೆಂಗಳೂರು: ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ದೂರ ಇಡಲಾಗಿದೆ, ಎನ್ನುವ ವಿವಾದಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಜೊತೆಗೆ ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನವನ್ನೂ ಯಡಿಯೂರಪ್ಪ ಅವರಿಗೆ ನೀಡಿದೆ. ಈ ಸಂಬಂಧ ರಚಿಸಲಾಗಿರುವ ಮೂರು ಸಮಿತಿಗೂ ಬಿಎಸ್‌ವೈ ಮುಖ್ಯಸ್ಥರಾಗಿದ್ದು, ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿದೆ.

ಹೌದು, ಚುನಾವಣಾ ದೃಷ್ಟಿಯಿಂದ ರಾಜ್ಯ ಬಿಜೆಪಿ ಘಟಕದಲ್ಲಿ ಮೂರು ಮಹತ್ವದ ಸಮಿತಿಗಳನ್ನು ರಚಿಸಲಾಗಿದೆ. ಸಾಂಪ್ರದಾಯಿಕ ಪ್ರಚಾರ ತಂಡ, ಆಧುನಿಕ ಪ್ರಚಾರ ತಂಡ ಹಾಗು ಬೂತ್ ಮಟ್ಟದ ಸಮಿತಿ ರಚಿಸಲಾಗಿದೆ. ಈ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ, ಮಾಧ್ಯಮಗಳಿಗೆ ಸೋರಿಕೆ ಮಾಡಿ ಸಂಚಾಲಕರ ಹೆಸರನ್ನೇ ಮುಖ್ಯಸ್ಥ ಎಂದು ಬಿಂಬಿಸಿ ಬಿಎಸ್‌ವೈಗೆ ಹಿನ್ನಡೆ ಎಂದು ಸುದ್ದಿ ಹರಿದಾಡುವಂತೆ ಮಾಡಲಾಗಿತ್ತು. ಇದು ರಾಜ್ಯ ಘಟಕ ಹಾಗು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿತ್ತು. ಇದೀಗ ಈ ವಿವಾದಕ್ಕೆ ಹೈಕಮಾಂಡ್ ತೆರೆ ಎಳೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ