224 ಕ್ಷೇತ್ರಗಳಿಗೂ ಸಿದ್ದು ಭೇಟಿ !

Kannada News

11-10-2017

ಬೆಂಗಳೂರು: ಬಿಜೆಪಿ ರಥಯಾತ್ರೆಗೆ ಸಿದ್ದರಾಮಯ್ಯ ಸೆಡ್ಡು ಹೊಡೆಯಲು, ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಇಡೀ ರಾಜ್ಯವನ್ನು ಸುತ್ತಲೂ ಸಿಎಂ ಸಿದ್ದರಾಮಯ್ಯ ತಯಾರಾಗಿದ್ದಾರೆ.

ಸಿಎಂ ನಡಿಗೆ ವಿಧಾನ ಸಭಾ ಕ್ಷೇತ್ರದ ಕಡೆಗೆ ಎಂಬ ಧೇಯ್ಯದಿಂದ, ಒಂದು ತಿಂಗಳನ್ನು ರಾಜ್ಯ ಸುತ್ತಲು ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಡಿಸೆಂಬರ್​​15 ರಿಂದ ಜನವರಿ 15ವರೆಗೂ ಸುತ್ತಾಟ ನಡೆಸಲಿದ್ದಾರೆ ಎನ್ನಲಾಗಿದೆ. ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳನ್ನ ಸಿಎಂ ಭೇಟಿ ಮಾಡಲಿದ್ದಾರೆ. ಅಲ್ಲದೇ ತಾಲ್ಲೂಕು ಕ್ಷೇತ್ರದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಂಡು ರೋಡ್​ ಶೋ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಎಂದು ಜನರ ಬಳಿಗೆ ಬರಲು ಸಜ್ಜಾಗುತ್ತಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ