ನೂತನ ವೋಲ್ವೋ ಹೈಬ್ರಿಡ್ ಕಾರಿಗೆ ಪೆಟ್ರೋಲ್ ಬದಲಿಗೆ ಡೀಸೆಲ್

Kannada News

28-03-2017 221

ಮಂಗಳೂರು: ಶಾಸಕ ಮೊಯ್ದಿನ್ ಬಾವ ಅವರ ನೂತನ ವೋಲ್ವೋ ಹೈಬ್ರಿಡ್ ಕಾರಿಗೆ ನಗರದ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಬದಲಿಗೆ ಡೀಸೆಲ್ ಹಾಕಿದ ಘಟನೆ ಸೋಮವಾರ ನಡೆದಿದೆ. ಮೊಯ್ದಿನ್ ಬಾವ ಅವರ ಪುತ್ರ ಈ ಕಾರನ್ನು‌ನಗರಕ್ಕೆ ತಂದಿದ್ದು, ಕದ್ರಿಯ ಬಂಕ್‌ಗೆ ಪೆಟ್ರೋಲ್ ಹಾಕಲು ಕೊಂಡೊಯ್ದು ನಿಲ್ಲಿಸಿದರು. ಆದರೆ ಬಂಕ್ ನಿರ್ವಾಹಕ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ್ದಾನೆ. ಇದು ಗೊತ್ತಾದ ಬಳಿಕ‌ ಬಾವ ಅವರ ಪುತ್ರ ಮತ್ತು ಬಂಕ್‌ನವರಿಗೆ ವಾಗ್ವಾದ ನಡೆದಿದೆ. ಬಂಕ್‌ ಮಾಲೀಕರು ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ವೋಲ್ವೋ ಸರ್ವೀಸ್ ಸೆಂಟರ್ ಮಂಗಳೂರಿನಲ್ಲಿ ಇಲ್ಲದ ಕಾರಣ ಬೆಂಗಳೂರಿನ ಡೀಲರ್‌ಗೆ ಮಾಹಿತಿ ಕೊಟ್ಟಿದ್ದು ಅವರು ಬಂದು ಸರಿಪಡಿಸಲಿದ್ದಾರೆ. ಕೆಲ ದಿನ ಹಿಂದೆಯಷ್ಟೇ ಈ ೧.೫ ಕೋಟಿ ರೂಪಾಯಿ ಮೌಲ್ಯದ ವೋಲ್ವೋ ಹೈಬ್ರಿಡ್ ಕಾರನ್ನು ಶಾಸಕ ಬಾವ ಖರೀದಿಸಿದ್ದರು. ಪೆಟ್ರೋಲ್ ಹಾಗೂ ಬ್ಯಾಟರಿ ಎರಡರಲ್ಲೂ ಓಡುವ ಕಾರಿದು. ಭಾರತದಲ್ಲಿ ಇಂತಹ ಕಾರನ್ನು ಮೊದಲ ಬಾರಿಗೆ ವೋಲ್ವೋ ಪರಿಚಯಿಸಿದೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ