ವಿಕೃತ ಮನದ ವ್ಯಕ್ತಿ ಸೆರೆ

Kannada News

10-10-2017

ತೆಲುಗು ನಟಿಯರ ಫೋಟೋಗಳು ಹಾಗೂ ವಿಡಿಯೋವನ್ನು  ಅಶ್ಲೀಲವಾಗಿ ಬದಲಿಸಿ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡುತ್ತಿದ್ದ ಕಾಮುಕ ಸಿಕ್ಕಿಬಿದ್ದಿದ್ದಾನೆ. ಆಂಧ್ರಪ್ರದೇಶ ಮೂಲದ ದಾಸರಿ ಪ್ರದೀಪನನ್ನು, ಹೈದ್ರಾಬಾದ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ 30ಕ್ಕೂ ಹೆಚ್ಚು ವೆಬ್‌ಸೈಟ್‌ಗಳಲ್ಲಿ ಹೆಸರಾಂತ ನಟಿಯರ ಚಿತ್ರ ಮತ್ತು ದೃಶ್ಯಗಳನ್ನು ಅಶ್ಲೀಲವಾಗಿ ಬದಲಿಸಿ ಹಾಕುತ್ತಿದ್ದದ್ದು ಮಾತ್ರವಲ್ಲದೆ, ಅಸಭ್ಯ ಬರಹಗಳನ್ನೂ ಅಪ್‌ಲೋಡ್ ಮಾಡುತ್ತಿದ್ದನು.

ಸಂತ್ರಸ್ಥ ನಟಿಯರ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು, ಆರೋಪಿ ಪ್ರದೀಪನನ್ನು ಬಂಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ