ಜಮೀರ್ ವಿರುದ್ಧ ಗೌಡರ ಕಿಡಿ…

Kannada News

10-10-2017

ಜಮೀರ್ ಅಹ್ಮದ್ ಮಟ್ಟದ ಮುಸ್ಲಿಮ್ ನಾಯಕರು ಕಾಂಗ್ರೆಸ್‌ ಪಕ್ಷದಲ್ಲಿರಲಿಲ್ಲವೇನೋ ಅದಕ್ಕೆ ಅವರನ್ನ ಕರೆದುಕೊಳ್ಳುತ್ತಿದ್ದಾರೆ ಎಂದಿರುವ ಜೆಡಿಎಸ್ ವರಿಷ್ಠ ಹೆಚ್‌.ಡಿ.ದೇವೇಗೌಡರು, ಮುಂದೆ ಬೇಕಾದರೆ ಅವರನ್ನೇ ಉಪ ಮುಖ್ಯಮಂತ್ರಿಯಾಗಿ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ಮಾತನಾತ್ತಿದ್ದ ದೇವೇಗೌಡರು, ಜಮೀರ್ ಅಹಮದ್ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ನೈಸ್ ಸಂಸ್ಥೆ ವಿರುದ್ಧ ಸದನ ಸಮಿತಿಯೇ ವರದಿ ನೀಡಿದ್ದರೂ, ರಾಜ್ಯಸರ್ಕಾರ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ, ನಮ್ಮ ಪಕ್ಷದ ಜಿ.ಟಿ.ದೇವೇಗೌಡ ಕಣಕ್ಕಿಳಿಯುವುದು ಶತಃಸಿದ್ದ ಎಂದೂ ಸ್ಪಷ್ಟಪಡಿಸಿದರು.

--ಜಿ.ಆರ್. ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ