ಸಿಎಂ ಸಿದ್ದು ಕೆಂಡಾಮಂಡಲ

Kannada News

10-10-2017

ತಮ್ಮ ಪುತ್ರ ಡಾ.ಯತೀಂದ್ರ ಅವರ ಸಂಪರ್ಕ ಇರುವ ಶಾಂತಿ ಇಂಡಸ್ಟ್ರೀಸ್‌ಗೆ ಅಕ್ರಮವಾಗಿ ಭೂಮಿ ನೀಡಲಾಗಿದೆ ಎಂಬ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ ಅವರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.

ಈ  ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯನವರು, ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಚಾಳಿಯಾಗಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ನನ್ನ ಮಗನಿಗೆ ಹೇಳುತ್ತೇನೆ ಎಂದು ಗುಡುಗಿದ್ದಾರೆ.

 ಈ ಹಿಂದೆ ವಿಕ್ಟೋರಿಯ ಆಸ್ಪತ್ರೆ ಆವರಣದಲ್ಲಿ ತಪಾಸಣಾ ಕೇಂದ್ರ ತೆರೆಯುವುದಕ್ಕೆ ಡಾ.ಯತೀಂದ್ರ ಪಾಲುದಾರಿಕೆ ಹೊಂದಿರುವ ಕಂಪನಿಗೆ ಅವಕಾಶ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಯತೀಂದ್ರ ಅವರು, ಆ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.-ಜಿ.ಆರ್. ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ