ಜಯಂತಿಗಳ ಸಾಲಿಗೆ ಮತ್ತೊಂದು….

Kannada News

10-10-2017

ರಾಜ್ಯಸರ್ಕಾರ ಈಗಾಗಲೇ ಮಹಾತ್ಮ ಗಾಂಧಿ ಜಯಂತಿ, ಬಸವ ಜಯಂತಿ, ಅಂಬೇಡ್ಕರ್ ಜಯಂತಿ ಸೇರಿದಂತೆ 29 ಮಹಾನ್ ವ್ಯಕ್ತಿಗಳ ಮತ್ತು ಗಣ್ಯರ ಜಯಂತಿಗಳನ್ನು ಆಚರಿಸುತ್ತಿದೆ. 

ಇದೀಗ ಆ ಜಯಂತಿಗಳ ಸಾಲಿಗೆ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯೂ ಸೇರ್ಪಡೆಯಾಗಿದ್ದು, ಇದೇ ಅಕ್ಟೋಬರ್ 23ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಘೋಷಿಸಲಾಗಿದೆ.

ರಾಜ್ಯಸರ್ಕಾರ, ಕಳೆದ 3 ವರ್ಷಗಳಲ್ಲಿ ಜಯಂತಿಗಳ ಪಟ್ಟಿಗೆ ಹೊಸ ಹೆಸರುಗಳನ್ನು ಸೇರ್ಪಡೆ ಮಾಡುತ್ತಲೇ ಬಂದಿದೆ. ಇಲ್ಲಿಯವರೆಗೂ ಅ.23ರಂದು ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಎಂದು ಆಚರಿಸಲಾಗುತ್ತಿತ್ತು, ಇದೀಗ ದಿಢೀರ್ ಎಂದು ವಿಜಯೋತ್ಸವದ ಬದಲಾಗಿ ‘ಜಯಂತಿ‘ ಎಂದು ಆಚರಿಸಬೇಕೆಂದು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಘೋಷಿತವಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು, ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳು ಮತ್ತು ರಾಜ್ಯಮಟ್ಟದಲ್ಲಿ ಆಚರಿಸಲು ಸರ್ಕಾರದಿಂದ 69 ಲಕ್ಷ ರೂ. ವೆಚ್ಚಮಾಡಬೇಕಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿತ್ತು. ಅದೇ ಪ್ರಕಾರವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ