ಅನಿಲ ಭಾಗ್ಯ…

10-10-2017 323
ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಸುಮಾರು 15 ಲಕ್ಷ ಬಿಪಿಎಲ್ ಕಾರ್ಡ್ದಾರರ ಮನಗೆಲ್ಲಲು ಸಿದ್ದರಾಮಯ್ಯ ಸರ್ಕಾರ ಹೊಸ ಕಾರ್ಯತಂತ್ರ ರೂಪಿಸಿದೆ.
‘ಮುಖ್ಯಮಂತ್ರಿ ಅನಿಲ ಭಾಗ್ಯ’ ಹೆಸರಿನ ಹೊಸ ಯೋಜನೆಯ ಅನುಷ್ಠಾನಕ್ಕೆ ಸಜ್ಜಾಗುತ್ತಿರುವ ರಾಜ್ಯಸರ್ಕಾರ, ಕೇಂದ್ರ ಸರ್ಕಾರದ ಇದೇ ರೀತಿಯ ಉಜ್ವಲ ಯೋಜನೆಯನ್ನೂ ಮೀರಿಸಿ ಬಂಪರ್ ಆಫರ್ ಕೊಡಲು ತೀರ್ಮಾನಿಸಿದೆ. ಇದೇ ನವೆಂಬರ್ನಿಂದ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಲಿದ್ದು, ಡಿಸೆಂಬರ್ನಿಂದಲೇ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಗ್ಯಾಸ್ ಸ್ಟೌ, ರೆಗ್ಯುಲೇಟರ್ ಮತ್ತು ಪೈಪ್ ಸೇರಿದ ಈ ಪ್ಯಾಕೇಜ್ ಯೋಜನೆಯಡಿ ಸೌಲಭ್ಯ ಪಡೆಯುವ ಪ್ರತಿ ಫಲಾನುಭವಿಗೆ ಸರ್ಕಾರವೇ 4040 ರೂಪಾಯಿ ವೆಚ್ಚ ಮಾಡುತ್ತಿದೆ. ಈ ಯೋಜನೆ ಜಾರಿಗೆ ತರಲು ಒಟ್ಟಾರೆ 1200 ಕೋಟಿ ರೂಪಾಯಿಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಒಂದು ಕಮೆಂಟನ್ನು ಹಾಕಿ