ಕಾವೇರಿ ನದಿ ರಕ್ಷಣೆಗೆ ಅಭಿಯಾನ…

Kannada News

09-10-2017

ಮನುಷ್ಯರ ದೇಹದಲ್ಲಿರುವ ನೀರಿನ ಪ್ರಮಾಣ ಶೇಕಡ 70ರಷ್ಟು ಎಂದು ವೈದ್ಯರು ಹೇಳುತ್ತಾರೆ. ಅದೇ ರೀತಿ, ಇವತ್ತು ಬೆಂಗಳೂರಿನಲ್ಲಿ ವಾಸ ಮಾಡುವ ಎಲ್ಲರಲ್ಲಿ ಶೇಕಡ 70 ರಷ್ಟು ಕಾವೇರಿಯೇ ಇದ್ದಾಳೆ.

ಕರ್ನಾಟಕದ ಜೀವನದಿ ಕಾವೇರಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಈ ಬಗ್ಗೆ ಚರ್ಚಿಸಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಮತ್ತು ಮುಂದೇನು ಮಾಡಬೇಕು ಎಂದು ನಿರ್ಧರಿಸಲು, ಇದೇ ಅಕ್ಟೋಬರ್ 14ರ ಶನಿವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಸಮಾವೇಶ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ, ಎಲ್ಲರೂ ಪ್ರೀತಿಯಿಂದ ತಾಯಿಯೆಂದು, ಕಾವೇರಮ್ಮನೆಂದು ಕರೆಯುವ ನದಿಯಿಂದ ಆಗಿರುವ ಲಾಭಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಂಡು ಧನ್ಯವಾದ ಅರ್ಪಿಸಲಾಗುತ್ತದೆ.

ಕಾವೇರಿ ನದಿಯ ನಿರಂತರತೆ, ಶುದ್ಧತೆ ಮತ್ತು ಪವಿತ್ರತೆ ಕಾಪಾಡಲು ಏನು ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ.

ಕಾವೇರಿ ನದಿ ಉಳಿಸಿ ಸಮಾವೇಶದಲ್ಲಿ, ಸೇವ್ ರಿವರ್ ಕಾವೇರಿ ಸಂಘಟನೆಯ ದೇವಿಕಾ ದೇವಯ್ಯ, ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಮುತ್ತಣ್ಣ, ಖ್ಯಾತ ಮಾಧ್ಯಮ ತಜ್ಞ, ಚಿಂತಕ ದೀಪಕ್ ತಿಮ್ಮಯ ಮತ್ತು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಲಿದ್ದಾರೆ. ಎಲ್ಲಾ ಆಸಕ್ತರೂ ಭಾಗವಹಿಸಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ