ಮೋದಿ ಹಣೆಗೆ ಮಣ್ಣಿನ ತಿಲಕ…

Kannada News

09-10-2017

ಸದ್ಯದಲ್ಲೇ ಗುಜರಾತ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಯಾವುದೇ ಕಾರಣಕ್ಕೂ ಗುಜರಾತ್‌ ನಲ್ಲಿ ಅಧಿಕಾರ ಕಳೆದುಕೊಳ್ಳಬಾರದು ಅನ್ನುವುದು ಬಿಜೆಪಿ ಬಯಕೆ. ಅದರಲ್ಲೂ ಮೋದಿ ಮತ್ತು ಅಮಿತ್ ಷಾ ಜೋಡಿಗಂತೂ ಗುಜರಾತ್ ನಲ್ಲಿ ಗೆಲುವು ಅನಿವಾರ್ಯ. ಇಲ್ಲವಾದರೆ ಇವರಿಬ್ಬರ ವಿರುದ್ಧ ಈಗಾಗಲೇ ಪಕ್ಷದೊಳಗೆ ಎದ್ದಿರುವ ಅಪಸ್ವರಗಳು ಮತ್ತಷ್ಟು ಗಟ್ಟಿಯಾಗಿ ಮೋದಿ ಅವರು ಹಿನ್ನಡೆ ಅನುಭವಿಸಬೇಕಾದ ಮತ್ತು ತಗ್ಗಿ ಬಗ್ಗಿ ನಡೆಯುವಂಥ ಪರಿಸ್ಥಿತಿ ಸೃಷ್ಟಿಯಾಗಬಹುದು.

ಹೀಗಾಗಿಯೇ ಏನೋ ಪ್ರಧಾನಿ ಮೋದಿ ಕಳೆದ ಒಂದು ತಿಂಗಳಿನಿಂದ ಮೂರನೇ ಬಾರಿ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಈ ಬಾರಿ, ತಾವು ಹುಟ್ಟಿ ಬೆಳೆದ ಮೆಹ್ಸಾನಾ ಜಿಲ್ಲೆಯ ವಾಡ್‌ನಗರಕ್ಕೆ ಭೇಟಿ ನೀಡಿದ್ದಾರೆ. ಇದು ದೇಶದ ಪ್ರಧಾನಿಯಾದ ನಂತರ ತಾವು ಹುಟ್ಟಿದ ಊರಿಗೆ ನೀಡುತ್ತಿರುವ ಮೊದಲ ಭೇಟಿ.

ವಾಡ್‌ ನಗರದ ಮಣ್ಣಿನ ಮಗನಾಗಿರುವ ಮೋದಿ, ತಾವು ಓದಿದ ಶಾಲೆಗೆ ಭೇಟಿ ನೀಡಿ, ಆ ಶಾಲೆಯ ಹೊಸ್ತಿಲಿಗೆ ನಮಸ್ಕರಿಸಿದ್ದಲ್ಲದೆ, ಶಾಲೆಯ ಆವರಣದಲ್ಲಿನ ಮಣ್ಣನ್ನು ತಿಲಕದ ರೂಪದಲ್ಲಿ ಹಣೆಗಿರಿಸಿಕೊಂಡರು.

ಈ ನೆಲ, ನನಗೆ ನೀಡಿದ ಸಂಸ್ಕಾರವೇ ನನ್ನನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಹೇಳಿದ ಪ್ರಧಾನಿ ಮೋದಿ, 500 ಕೋಟಿ ರೂಪಾಯಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು. ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಇಡೀ ವಾಡ್‌ನಗರದಲ್ಲಿ ಹಬ್ಬದ ವಾತಾವಾರಣ ಏರ್ಪಟ್ಟಿತ್ತು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ