ಇದು ಎಂಥ ಧರ್ಮ..? ಯಾವ ನ್ಯಾಯ..?

Kannada News

07-10-2017

ಬೆಂಗಳೂರು: ನಾನು ಕ್ರೈಸ್ತ ಯುವಕನೊಬ್ಬನನ್ನು ವಿವಾಹವಾಗುವುದನ್ನು ತಪ್ಪಿಸಲು ಕೇರಳದ ಯೋಗ ಕೇಂದ್ರವೊಂದರಲ್ಲಿ 31 ದಿನಗಳ ಕಾಲ ಕೂಡಿ ಹಾಕಿ ದೈಹಿಕ ಹಿಂಸೆ ನೀಡಲಾಗಿದೆ ಎಂದು ನಗರದ ಯುವತಿಯೊಬ್ಬಳು ಕೇರಳದ ಎರ್ನಾಕುಲಂ  ಪೊಲೀಸರಿಗೆ ದೂರು ನೀಡಿದ್ದಾಳೆ.

ಎರ್ನಾಕುಲಂ ನ ಶಿವಶಕ್ತಿ ಯೋಗ ವಿದ್ಯಾ ಕೇಂದ್ರದ ವಿರುದ್ಧ ದೂರು ಸಲ್ಲಿಸಿರುವ ಯುವತಿಯು, ಕ್ರೈಸ್ತ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನು  ಮದುವೆಯಾಗಲು ನಿರ್ಧರಿಸಿದ್ದೆ, ಇದನ್ನು ತಿಳಿದ  ನನ್ನ ಪೋಷಕರು ಕೇರಳದ ಯೋಗ ಕೇಂದ್ರಕ್ಕೆ ಕರೆದೊಯ್ದರು.

ಅಲ್ಲಿ ಮಾರ್ಚ್ ನಿಂದ ಮೇವರೆಗೆ ಕೂಡಿಡಲಾಗಿತ್ತು. ಪ್ರೀತಿಸಿದ ಯುವಕನನ್ನು ಹಿಂದು ಧರ್ಮಕ್ಕೆ ಮತಾಂತರಗೊಳಿಸಬೇಕು ಅಥವಾ ಹಿಂದು ಯುವಕನನ್ನೇ ಮದುವೆಯಾಗಬೇಕು. ಹಾಗಾದಲ್ಲಿ ಮಾತ್ರ ಬಿಡುಗಡೆ ಮಾಡುವುದಾಗಿ ಹಿಂಸಿಸುತ್ತಿದ್ದರು. ತಪ್ಪಿಸಿಕೊಳ್ಳಲು ಮುಂದಾದಾಗ ಹಲ್ಲೆ ನಡೆಸಿದರು.

ಇದರಿಂದ ಹೆದರಿದ ನಾನು ಕೊನೆಗೆ ಹಿಂದು ಯುವಕನೊಬ್ಬನನ್ನು ಮದುವೆಯಾಗಿದ್ದೇನೆ, ಆತನ ಜೊತೆ ಸಂಸಾರ ನಡೆಸಲು ನನಗೆ ಇಷ್ಟವಿಲ್ಲ, ಆತನಿಗೆ ವಿಚ್ಛೇದನ ನೀಡಿ, ನಾನು ಪ್ರೀತಿಸಿದ ಕ್ರೈಸ್ತ ಯುವಕನನ್ನೇ ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಅಕ್ಟೋಬರ್ 3 ರಂದು ಇ-ಮೇಲ್ ಮೂಲಕ ಯುವತಿ ದೂರು ಸಲ್ಲಿಸಿದ್ದಾಳೆ.

ಇನ್ನು ದೂರು ದಾಖಲಿಸಿದ ಪೊಲೀಸರು ತನಿಖೆ ಕೈಗೊಳ್ಳುವಷ್ಟರಲ್ಲಿ ಶಿವಶಕ್ತಿ ಯೋಗ ವಿದ್ಯಾ ಕೇಂದ್ರದ ಅಧಿಕಾರಿಗಳು ಪರಾರಿಯಾಗಿದ್ದಾರೆ. ಸಂಸ್ಥೆ ವಿರುದ್ಧ ಕಳೆದ ತಿಂಗಳು ಇಬ್ಬರು ಮಹಿಳೆಯರು ದೂರು ನೀಡಿ, ತಮ್ಮನ್ನು ಬಲವಂತವಾಗಿ ಕೂಡಿಡಲಾಗಿತ್ತು. ತಮ್ಮಂತೆಯೇ 60 ಮಂದಿಯನ್ನು ಕೇಂದ್ರದಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದೆ ಎಂಬ ಆರೋಪ ಮಾಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ