ಇದು ಮೆದುಳಿನ ಮಾತು…!

Kannada News

07-10-2017

ನಾವು ತಿನ್ನುವ ಆಹಾರ ಜೀರ್ಣವಾದ ನಂತರ ಅದು ಮತ್ತೊಂದು ರೂಪದಲ್ಲಿ ನಮ್ಮ ಶರೀರದಿಂದ ಹೊರಹೋಗುವುದು ಮತ್ತು ಅದಕ್ಕಾಗಿ ಇರುವ ವ್ಯವಸ್ಥೆ ನಮಗೆಲ್ಲರಿಗೂ ಗೊತ್ತು. ಆದರೆ, ನಮ್ಮ ಮೆದುಳಿನಲ್ಲೂ ಇದೇ ರೀತಿ ತ್ಯಾಜ್ಯ ಅಥವ ಕಸವನ್ನು ಹೊರ ಹಾಕುವಂಥ ವ್ಯವಸ್ಥೆ ಇದೆಯೆಂದು, ಅಮೆರಿಕದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ಸಂಶೋಧಕರು ಕಂಡುಹಿಡಿದಿದ್ದಾರೆ.

Lymphatic Vessel ಅಥವ ದುಗ್ದರಸ ನಾಳಗಳನ್ನು, ನಮ್ಮ ಮೆದುಳು ತನ್ನಲ್ಲಿ ಉತ್ಪನ್ನವಾಗುವ ತ್ಯಾಜ್ಯವನ್ನು ಹೊರಗೆ ಸಾಗಿಸುವ ವ್ಯವಸ್ಥೆಯಾಗಿ ಬಳಸಿಕೊಳ್ಳುತ್ತಿದೆಯಂತೆ. ಇದೇನೋ ಸರಿ ಆದರೆ, ನಮ್ಮ ಮೆದುಳಿನಲ್ಲಿ ಮೂಡುವ ದುರಾಲೋಚನೆಗಳನ್ನೂ ಹಾಗೇ ದೂರಕ್ಕೆ ಕಳಿಸುವ ಒಂದು ವ್ಯವಸ್ಥೆಯೂ ಇದ್ದಿದ್ದರೆ ತುಂಬಾ ಚೆನ್ನಾಗಿರುತಿತ್ತೇನೋ….


ಸಂಬಂಧಿತ ಟ್ಯಾಗ್ಗಳು

ಇದು ಮೆದುಳಿನ ಮಾತು…! ಮಾತು…!


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ