ಪ್ರಾಣ ತೆಗೆದ ರೈನ್ ಕೋಟ್.!

Kannada News

07-10-2017

ಬೆಂಗಳೂರು: ಬಾಣಸವಾಡಿಯ ಹೆಚ್.ಆರ್.ಬಿ.ಆರ್. ಲೇಔಟ್‍ ನಲ್ಲಿ ನಿನ್ನೆ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಕಮರ್ಷಿಯಲ್ ಸ್ಟ್ರೀಟ್‍ ನ ಗಿಫ್ಟ್ ಸೆಂಟರ್‍ವೊಂದರಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ರಾಮಾಂಜನಪಾಂಡೆ (53)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ರಾತ್ರಿ ಕೆಲಸ ಮುಗಿಸಿಕೊಂಡು ಹೆಚ್.ಆರ್.ಬಿ.ಆರ್ ಲೇಔಟ್‍ ನ 2ನೇ ಬ್ಲಾಕ್‍ ನ ಮನೆಗೆ ಮಳೆಯಲ್ಲಿ ನೆನೆದುಕೊಂಡು ಹೋಗಿದ್ದಾರೆ.

ಹಾಕಿಕೊಂಡಿದ್ದ ರೈನ್ ಕೋಟ್ ಮಳೆಗೆ ತೊಯ್ದಿದ್ದರಿಂದ ಅದನ್ನು ಮನೆಯ ಹೊರಗಿನ ತಂತಿ ಮೇಲೆ ಒಣ ಹಾಕಲು ಹೋದಾಗ ಅದಕ್ಕೆ ವಿದ್ಯುತ್ ತಂತಿ ತಗುಲಿದ್ದು, ತಂತಿ ಸ್ಪರ್ಶಿಸಿದ ರಾಮಾಂಜನಪಾಂಡೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ರಾಮಾಂಜನಪಾಂಡೆ, ಸಣ್ಣ ಪ್ರಮಾಣದ ಶಾಕ್ ಗೆ ಮೃತಪಟ್ಟಿದ್ದು, ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಪ್ರಾಣ ತೆಗೆದ ರೈನ್ ಕೋಟ್.!


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ