ಸಾಲದ ಸುಳಿಗೆ ಎಂಜಿನಿಯರ್ ಬಲಿ !

Kannada News

07-10-2017

ಬೆಂಗಳೂರು: ಮಲ್ಲೇಶ್ವರಂನ 11ನೇ ಕ್ರಾಸ್‍ ನ ಮನೆಯಲ್ಲಿ ನಿನ್ನೆ ರಾತ್ರಿ ಬೇರೆಯವರ ಸಹಭಾಗಿತ್ವದಲ್ಲಿ ಉದ್ಯಮ ನಡೆಸಿ ನಷ್ಟಕ್ಕೊಳಗಾಗಿ ನೊಂದ ಸಾಫ್ಟ್ ವೇರ್  ಎಂಜಿನಿಯರೊಬ್ಬರು. ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಮಲ್ಲೇಶ್ವರಂ 11ನೇ ಕ್ರಾಸ್ ನ ಮಂಜುನಾಥ್ (25)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಸ್ನೇಹಿತನ ಜೊತೆ ಸಹಭಾಗಿತ್ವದಲ್ಲಿ ಸ್ವಂತ ಉದ್ದಿಮೆ ಆರಂಭಿಸಿ, ನಷ್ಟ ಮಾಡಿಕೊಂಡಿದ್ದರು. ನಷ್ಟ ತುಂಬಲು ಸಾಕಷ್ಟು ಸಾಲ ಮಾಡಿಕೊಂಡಿದ್ದ ಮಂಜುನಾಥ್, ಇತ್ತೀಚೆಗೆ ಕೆಲಸಕ್ಕೆ ಹೋಗುತ್ತಿದ್ದ ಐಬಿಎಂ ಕಂಪನಿಯನ್ನು ಬಿಟ್ಟು ಸಾಲ ಕೊಟ್ಟವರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ.

ನಿನ್ನೆ ರಾತ್ರಿ ತಂದೆ ಹೋಟೆಲ್ ನಲ್ಲಿ ಕೆಲಸಕ್ಕೆ ಹೋಗಿದ್ದು, ಪತ್ನಿ ಹೆಬ್ಬಾಳಕ್ಕೆ ಹೋಗಿ ಒಂಟಿಯಾಗಿದ್ದ ಅವರು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ ಗೆ ಒಂದು ಮಗುವಿದೆ. ಪ್ರಕರಣ ದಾಖಲಿಸಿರುವ ಪೊಲೀಸ್ ಇನ್ಸ್ ಪೆಕ್ಟರ್ ಪ್ರಸಾದ್ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ