ಕಳ್ಳರ ಜಗಳ ಕೊಲೆಯಲ್ಲಿ ಅಂತ್ಯ !

Kannada News

07-10-2017

ಬೆಂಗಳೂರು: ಮೂವರು ಕಳ್ಳರ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕಾಲಿನ ನರ ಕತ್ತರಿಸಿ ಕೊಲೆಯಾಗುವುರರೊಂದಿಗೆ ಅಂತ್ಯವಾಗಿರುವ ದುರ್ಘಟನೆಯು, ನಗರದ ಕಾಟನ್ ಪೇಟೆಯ ಫ್ಲವರ್ ಗಾರ್ಡನ್‍ ನಲ್ಲಿ ನಡೆದಿದೆ.

ಫ್ಲವರ್ ಗಾರ್ಡನ್ ಅಜಿತ್ (19)ಕೊಲೆಯಾದ ಜೇಬುಗಳ್ಳನಾಗಿದ್ದಾನೆ. ಯಾವುದೇ ಕೆಲಸಕ್ಕೆ ಹೋಗದೆ ಜನ ನಿಬಿಡ ಪ್ರದೇಶಗಳಲ್ಲಿ ಜೇಬುಕಳ್ಳತನ ಮಾಡುತ್ತಿದ್ದ, ಅಜಿತ್‍ ಗೆ ತಂಬಿ ಅಲಿಯಾಸ್ ಅಜಿತ್ ಹಾಗೂ ಅರವಿಂದ್ ಪರಿಚಯವಾಗಿದ್ದರು. ಈ ಮೂವರು ಕಳ್ಳತನಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದರು.

ಇತ್ತೀಚಿಗೆ ತಂಬಿ ಹಾಗೂ ಅರವಿಂದ್ ಕಳ್ಳತನ ಬಿಟ್ಟು ಗಾರೆ ಕೆಲಸ, ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಆಗಾಗ ಅಜಿತ್ ಜೊತೆ ಸೇರಿ ಕಾಲ ಕಳೆಯುತ್ತಿದ್ದರು. ಫ್ಲವರ್‍ ಗಾರ್ಡನ್ ಬಳಿ ನಿನ್ನೆ ಬೆಳಿಗ್ಗೆ 8.30ರ ವೇಳೆ ಕ್ಷುಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ. ಇನ್ನು ಜಗಳ ವಿಕೋಪಕ್ಕೆ ತಿರುಗಿದಾಗ ಅರವಿಂದ್, ಅಜಿತ್‍ ಕಾಲಿನ ಮಂಡಿ ಚಿಪ್ಪಿನ ಹಿಂಭಾಗದ ಕೆಳಗೆ ಚಾಕುವಿನಿಂದ ಕೂಯ್ದಿದ್ದು, ಚಾಕು ಆಳಕ್ಕಿಳಿದು ನರ ಕಟ್ ಆಗಿ ರಕ್ತಸ್ರಾವಗೊಂಡಿದೆ. ರಕ್ತ ನಿಲ್ಲಿಸಲು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ, ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. 

ತೀವ್ರ ರಕ್ತಸ್ರಾವದಿಂದ ಆಸ್ವಸ್ಥಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5.45ರ ವೇಳೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿರುವ ಕಾಟನ್ ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ ಸ್ವಾಮಿ ಅವರು, ತಂಬಿ ಹಾಗೂ ಅರವಿಂದ್‍ ಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ