ಒಮ್ಮೆ ರಾಷ್ಟ್ರಪತಿ ಭವನಕ್ಕೆ ಬಂದು ಹೋಗಿ…!

Kannada News

07-10-2017

ನೀವೇನಾನಾದ್ರೂ ದೆಹಲಿಗೆ ಬಂದ್ರೆ, ಒಂದು ಸಾರಿ ನಮ್ಮನೆಗೆ ಬಂದು ಹೋಗಿ ಅಂತ ಕರೀತಿದ್ದಾರೆ ಇವರು…ಯಾರನ್ನು ಕರೀತಿದ್ದಾರೆ ಅಂದ್ರಾ? ಭಾರತ ದೇಶದ ಎಲ್ಲರನ್ನೂ ಕರೀತಿದ್ದಾರೆ ಸ್ವಾಮಿ. ಯಾರಪ್ಪಾ ಅಂಥೋರು ಎಲ್ಲರನ್ನೂ ನಮ್ಮನೆಗೆ ಬನ್ನಿ ಅಂತ ಕರೆಯೋ ಪುಣ್ಯಾತ್ಮರು ಅಂದ್ರಾ? ಅವರು, ಈ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್.  ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಭಾರತ ದೇಶದ ಎಲ್ಲ ನಾಗರಿಕರಿಗೂ ಆಹ್ವಾನ ಕೊಟ್ಟಿರೋ ರಾಷ್ಟ್ರಪತಿ ಕೋವಿಂದ್ ಅವರು ’ಮುಂದಿನ ಬಾರಿ ದೆಹಲಿಗೆ ಬಂದಾಗ, ನೀವು ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡಿ, ರಾಷ್ಟ್ರಪತಿ ಭವನ ವಿಶ್ವದಲ್ಲಿರೋ ಎಲ್ಲಾ ಭಾರತೀಯರಿಗೆ ಸೇರಿದ್ದು’ ಅಂತ ಹೇಳಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು, ಸಾಮಾನ್ಯ ಜನರನ್ನೂ ದೆಹಲಿಯ ರೈಸಿನಾ ಹಿಲ್‌ ನಲ್ಲಿರೋ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ಅಂತ ಅಂದಿರೋದರ ಬಗ್ಗೆ ತುಂಬಾ ಜನ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಎಪಿಜೆ ಅಬ್ದುಲ್ ಕಲಾಮ್ ಅವರು ರಾಷ್ಟ್ರಪತಿಯಾಗಿದ್ದಾಗ, ಮಕ್ಕಳಿಗೆ ಮತ್ತು ಯುವ ಸಮುದಾಯದ ನೂರಾರು ಮಂದಿಗೆ 340 ಕೊಠಡಿಗಳ ಭವ್ಯ ಕಟ್ಟಡ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅದನ್ನು ಹೊರತುಪಡಿಸಿದರೆ, ಪ್ರತಿವರ್ಷ ಫೆಬ್ರವರಿಯಲ್ಲಿ ಮಾತ್ರ  ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್‌ ಗೆ ಜನಸಾಮಾನ್ಯರು ಭೇಟಿ ಕೊಡಬಹುದಿತ್ತು.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ