ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ !

Kannada News

07-10-2017

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಇದೇ 25ರಂದು ಚುನಾವಣೆ ನಿಗದಿಯಾಗಿರುವ ಬೆನ್ನಲ್ಲೇ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.

ಪ್ರಸ್ತುತ ನಗರಯೋಜನೆ, ಶಿಕ್ಷಣ, ಲೆಕ್ಕಪತ್ರ ಹಾಗೂ ವಾರ್ಡ್‍ಮಟ್ಟದ ಕಾಮಗಾರಿ ಸಮಿತಿಯನ್ನು ಹೊಂದಿರುವ ಜೆಡಿಎಸ್‍ ಗೆ, ಈ ಬಾರಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಬೃಹತ್ ಕಾಮಗಾರಿ, ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ದೊರೆಯುವ ಸಾಧ್ಯತೆ ಇದೆ.

ಜೆಡಿಎಸ್, ಪಕ್ಷೇತರರನ್ನು ತೃಪ್ತಿಪಡಿಸಿದ ನಂತರ ಉಳಿಯುವ ಸಮಿತಿಗಳು ಕಾಂಗ್ರೆಸ್ ಪಾಲಾಗಲಿದ್ದು, ಹಿರಿಯ ಸದಸ್ಯರಿಗೆ ಮಣೆಹಾಕಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹಿರಿಯ ಸದಸ್ಯರಾದ ಗೋವಿಂದರಾಜು, ರಾಮಚಂದ್ರ, ಕೇಶವಮೂರ್ತಿ, ಜಾಕೀರ್‍ ಹುಸೇನ್, ರಾಜಣ್ಣ ಅವರ ಹೆಸರು ಮುಂಚೂಣಿಯಲ್ಲಿದ್ದರೆ ಇವರೊಂದಿಗೆ ಹೊಸಬರಾದ ಆಂಜನಪ್ಪ, ವೇಲುನಾಯ್ಕರ್ ಅವರ ಹೆಸರುಗಳು ಕೇಳಿಬರುತ್ತಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ