ಮೌನಿ ಸಾಹಿತಿಗಳಿಗೆ ಧರ್ಮಸಂಕಟ...

Kannada News

07-10-2017

ಲಿಂಗಾಯತ-ವೀರಶೈವ ಧರ್ಮದ ಹೋರಾಟಗಳು ತೀವ್ರಗೊಳ್ಳುತ್ತಿದ್ದು, ರಾಜಕಾರಣಿ ಮತ್ತು ಮಠಾಧಿಪತಿಗಳು ಮುಂಚೂಣಿಯಲ್ಲಿ ನಿಂತಿರುವುದು ಎದ್ದು ಕಾಣುತ್ತಿದೆ.

ಆದರೆ ಸಮಾಜದ ಆಗುಹೋಗುಗಳಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸುವ ಸಾಹಿತಿಗಳು, ಬರಹಗಾರರು, ಪ್ರಗತಿಪರರು ಏಕೆ ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿವೆ.

ಸದರಿ ಸಮುದಾಯಗಳಿಗೆ ಸೇರಿದ ಅನೇಕಾನೇಕ ಬರಹಗಾರರು, ಸಾಹಿತಿಗಳು ಇದ್ದು, ಅವರಲ್ಲಿ ಕೆಲ ಮಂದಿ ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಇರುವಂಥವರು, ಹೀಗಾಗಿ ಧರ್ಮದ ವಿಚಾರ ಬಂದಾಗ ಕನಿಷ್ಟ ತಮ್ಮ ಸಲಹೆ ಮಾರ್ಗದರ್ಶನವನ್ನಾದರೂ ಹೋರಾಟಗಾರರಿಗೆ ನೀಡದೆ, ಅಂತರ ಕಾಯ್ದುಕೊಳ್ಳುತ್ತಿರುವುದೇಕೆ..? ಧರ್ಮಗಳೆಚ್ಚುತ್ತಾ ಹೋದರೆ ಏನಾಗುತ್ತೆ..? ಲಿಂಗಾಯತ-ವೀರಶೈವರ ಹೋರಾಟ ಎಷ್ಟರ ಮಟ್ಟಿಗೆ ಸಮಾಜ ಮತ್ತು ಸಮುದಾಯಕ್ಕೆ ಒಳಿತು-ಕೆಡಕು ತರಬಲ್ಲದು ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸದೆ, ತಮ್ಮ ಪಾಡಿಗೆ ತಾವಿರುವುದು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವಲ್ಲವಾ..? ಸಮಾಜದಲ್ಲಿನ ಬಹುಮುಖ್ಯ ಅಂಗವಾಗಿರುವ ಸಾಹಿತಿಗಳೇಕೆ ಮೌನ ಮುರಿಯುತ್ತಿಲ್ಲ ಎಂಬ ಪ್ರಶ್ನೆಗಳೂ ಎದುರಾಗಿವೆ.

ಅದರಲ್ಲು ಲಿಂಗಾಯತ-ವೀರಶೈವ ಎಂದು ಹೋರಾಟ ಮಾಡುತ್ತಿರುವವರೆ ಕನಿಷ್ಟ ನಮ್ಮ ಸಮುದಾಯದ ಸಾಹಿತಿಗಳಾದರೂ, ತಮ್ಮ ಬಾಯಿ ಬಿಡಬಾರದಾ? ಪ್ರತ್ಯೇಕ ಧರ್ಮವಾದಾಗ ಅದರ ಲಾಭಗಳನ್ನ ಮಾತ್ರ ಅವರ ತಲೆಮಾರುಗಳು ಅನುಭವಿಸಲು ಮಾತ್ರ ಬರುತ್ತಾರೆ, ಧರ್ಮಸಂಕಟದ ಈ ಸಂದರ್ಭದಲ್ಲಿ ತಮ್ಮ ನಿಲುವನ್ನಾದರೂ ಹೇಳಬಾರದಾ ಎಂಬ ಪ್ರಶ್ನೆಯನ್ನೆಸೆಯುತ್ತಿರುವುದು ಮೌನಿ ಸಾಹಿತಿಗಳಿಗೆ ತಲೆಬೇನೆಯಾಗುತ್ತಿದೆ.

ವರದಿ: ಜಿ.ಆರ್.ಸತ್ಯಲಿಂಗರಾಜುಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ