7 ಸೈನಿಕರ ಸಾವು !

Kannada News

07-10-2017

ನವದೆಹಲಿ: ಅರುಣಾಚಲ ಪ್ರದೇಶ ತವಾಂಗ್ ಪ್ರದೇಶದಲ್ಲಿ  ಐಎಎಫ್​ನ ಎಂಐ-17 ವಿ5 ಹೆಲಿಕಾಪ್ಟರ್ ಪತನಗೊಂಡಿದ್ದು, ಈ ಅವಘಡದಲ್ಲಿ ವಾಯುಪಡೆಯ ಐವರು ಹಾಗೂ ಭೂ ಸೇನೆಯ ಇಬ್ಬರು ಸೇರಿ ಒಟ್ಟು ಏಳು ಸೈನಿಕರು ಸಾವನ್ನಪ್ಪಿದ್ದಾರೆ.

ಐಎಎಫ್​ ನ ವಿಂಗ್ ಕಮಾಂಡರ್ ವಿಕ್ರಂ ಉಪಾಧ್ಯಾಯ, ಸ್ಕಾವಡ್ರನ್ ಮುಖಂಡ ಎಸ್.ತಿವಾರಿ, ಎಂಡಬ್ಲು ಎ.ಕೆ. ಸಿಂಗ್, ಸೇನಾಧಿಕಾರಿಗಳಾದ ಗೌತಮ್ ಹಾಗೂ ಸತೀಶ್ ಕುಮಾರ್. ಯೋಧರಾದ ಇ.ಬಾಲಾಜಿ ಹಾಗೂ ಎಚ್.ಎನ್.ಡೇಕಾ ಮೃತಪಟ್ಟವರು. ಚೀನಾ ಗಡಿಗೆ ಸಮೀಪದ ತವಾಂಗ್​ ನಿಂದ 130 ಕಿ.ಮೀ. ದೂರದ ಯಂಗಚಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಫ್ ತನಿಖೆಗೆ ಆದೇಶಿಸಿದೆ.


ಸಂಬಂಧಿತ ಟ್ಯಾಗ್ಗಳು

ನವದೆಹಲಿ 7 ಸೈನಿಕರು ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ