ಸುಮ್ಮನೊಮ್ಮೆ ನಕ್ಕು ಬಿಡಿ…

Kannada News

06-10-2017

ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ , ಮಿಗೆ ನೀನು ಬೇಡಿಕೊಳೊ  ಮಂಕುತಿಮ್ಮ ಎಂದು ಡಿವಿಜಿಯವರು ಹೇಳಿರುವುದನ್ನು ಇವತ್ತು ಮತ್ತೊಮ್ಮೆ ನೆನಪುಮಾಡಿಕೊಳ್ಳಲೇ ಬೇಕು. ಏಕೆಂದರೆ ಇವತ್ತು World Smile Day ವಿಶ್ವ ನಗುವಿನ ದಿನ.

ನಾವು ಎಸ್‌ಎಂಎಸ್, ವಾಟ್ಸಪ್‌, ಫೇಸ್ ಬುಕ್ ಇತ್ಯಾದಿಗಳಲ್ಲಿ ನಮ್ಮ ಖುಷಿ ವ್ಯಕ್ತಪಡಿಸಲು ಬಳಸುವ ಸ್ಮೈಲಿ ಫೇಸ್ ನಿಮಗೆಲ್ಲಾ ಗೊತ್ತಿದೆ. ಅಮೆರಿಕ ದೇಶದ ಮೆಸಾಚುಸೆಟ್ಸ್‌ ರಾಜ್ಯದ ವೊರ್ಸೆಸ್ಟೆರ್‌ ನಿವಾಸಿ ಹಾರ್ವೆ ಬಾಲ್ ಎಂಬ ವೃತ್ತಿಪರ ಚಿತ್ರಕಾರ 1963 ಈ ಸ್ಮೈಲಿಯನ್ನು ಸೃಷ್ಟಿಮಾಡಿದ. ಆನಂತರ ಈ ಸ್ಮೈಲಿ, ವಿಶ್ವಾದ್ಯಂತ ಅತಿಯಾಗಿ ಬಳಕೆ ಆಗುವುದು ಶುರುವಾಯಿತು. ಇದನ್ನು ನೋಡಿದ ಹಾರ್ವೆ ಬಾಲ್‌ ಗೆ ನಾವು ವಿಶ್ವ ನಗುವಿನ ದಿನ ಆಚರಿಸಬೇಕು ಎಂಬ ಐಡಿಯಾ ಹೊಳೆಯಿತಂತೆ. ಪ್ರತಿವರ್ಷದ ಒಂದು ದಿನವನ್ನು ನಗು ಮತ್ತು ದಯೆಯಿಂದ ಕೂಡಿದ ಕೆಲಸಗಳಿಗಾಗಿ ನಿಗದಿ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಆತನ ಚಿಂತನೆಯ ಫಲವಾಗಿ ಹುಟ್ಟಿದ್ದೇ ವಿಶ್ವ ನಗುವಿನ ದಿನ.  1999ರಿಂದ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರವನ್ನು ನಗುವಿನ ದಿನವಾಗಿ ಜಗತ್ತಿನೆಲ್ಲೆಡೆ ಆಚರಿಸಲಾಗುತ್ತಿದೆ.

ಹಾರ್ವೆ ಬಾಲ್ 2001ರಲ್ಲಿ ನಮ್ಮನ್ನು ಬಿಟ್ಟು ಹೋದ. ಆದರೆ, ಅವನ ಸದಾಶಯದ ಕಾರಣ ಹುಟ್ಟಿಕೊಂಡ ಈ ವಿಶ್ವ ನಗುವಿನ ದಿನ, ಸಂತೋಷ ಮತ್ತು ದಯಾಪರ ನಡವಳಿಕೆಗಳು ನಮ್ಮ ಜಗತ್ತಿಗೆ ಅತ್ಯಗತ್ಯ ಅನ್ನುವುದನ್ನು ಮತ್ತೆ ಮತ್ತೆ ನೆನಪುಮಾಡಿಕೊಡುತ್ತದೆ. ಹಾಗಿದ್ದರೆ…ಬನ್ನಿ ಎಲ್ಲರೂ ಸೇರಿ ಒಮ್ಮೆ ಬಾಯಿ ತುಂಬಾ ಮನದ ತುಂಬಾ ನಕ್ಕು ಬಿಡೋಣ…

 

 


ಸಂಬಂಧಿತ ಟ್ಯಾಗ್ಗಳು

ಸುಮ್ಮನೊಮ್ಮೆ ನಕ್ಕು ಬಿಡಿ ಬಿಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ