ಬಟ್ಟೆ ವ್ಯಾಪಾರಿಗೆ ಆನ್ ಲೈನ್ ಮೋಸ !

Kannada News

06-10-2017

ಬೆಂಗಳೂರು: ಬಟ್ಟೆ ಖರೀದಿಸಿ, ಆನ್ ಲೈನ್‍ ನಲ್ಲಿ ಹಣ ಕಳುಹಿಸುವುದಾಗಿ ಯುವತಿಯೊಬ್ಬಳು ಬಟ್ಟೆ ಮಾಲೀಕನಿಗೆ 62 ಸಾವಿರ ರೂಗಳ ವಂಚನೆ ನಡೆಸಿರುವ ದುರ್ಘಟನೆ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ನಡೆದಿದೆ.

ಕಮರ್ಷಿಯಲ್ ಸ್ಟ್ರೀಟ್‍ನ ಡಿಜೈನ್ ಫ್ಯಾಬ್ರಿಕ್ ಅಂಗಡಿಗೆ ಕಳೆದ ಸೆ.20 ರಂದು ಬಂದ ಯುವತಿಯೊಬ್ಬರು ಚೆಂದವಾಗಿ ಮಾತನಾಡಿ 62 ಸಾವಿರ ಮೌಲ್ಯದ ಬಟ್ಟೆ ಖರೀದಿಸಿ ಹಣವನ್ನು ಆನ್‍ ಲೈನ್ ಟ್ರಾನ್ಸಾಕ್ಷನ್ ಮಾಡೋದಾಗಿ ಮಾಲೀಕ ಉಜೂಜ್ ನಿಂದ ಖಾತೆ ನಂಬರ್ ತೆಗೆದುಕೊಂಡು ನಾಲ್ಕು ದಿನದ ನಂತರ ಹಣ ಖಾತೆಗೆ ಬರಲಿದೆ ಎಂದು ಹೇಳಿ ಹೋಗಿದ್ದಳು.

ಯುವತಿ ಹೋಗಿ ಹದಿನೈದು ದಿನ ಕಳೆದರೂ ಖಾತೆಗೆ ಹಣ ಜಮೆ ಆಗದಿದ್ದರಿಂದ, ವಂಚನೆಗೊಳಗಾದ ಮಾಲೀಕ ಉಜೂರ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಮಾಹಿತಿ ಪಡೆದುಕೊಂಡ ಪೊಲೀಸರು ವಂಚಕಿಗಾಗಿ ಬಲೆ ಬೀಸಿದ್ದಾರೆ.

              

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ