ಅನುಮಾನಾಸ್ಪದವಾಗಿ ಕಾಣೆಯಾದ ಮಗು !

Kannada News

06-10-2017

ಬೆಂಗಳೂರು: ಮನೆಯ ಮುಂಭಾಗ ಆಟವಾಡುತ್ತಿದ್ದ ಮಗುವೊಂದು ಅನುಮಾನಾಸ್ಪದವಾಗಿ ಕಾಣೆಯಾಗಿರುವ ಘಟನೆ, ಕೊತ್ತನೂರಿನ ಹೆಗ್ಡೆನಗರದ ಎಕ್ಸ್ ಸರ್ವಿಸ್‍ ಮನ್ ಲೇಔಟ್‍ ನಲ್ಲಿ ನಡೆದಿದೆ.

ರಾಯಚೂರು ಮೂಲದ ಮಹೇಶ್ವರಿ ಅವರು ಪತಿಯೊಂದಿಗೆ ಎಕ್ಸ್ ಸರ್ವಿಸ್‍ ಮನ್ ಲೇಔಟ್‍ ನಲ್ಲಿ ಕಳೆದ ಐದು ವರ್ಷಗಳಿಂದ ವಾಸಿಸುತ್ತಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಅವರ ಒಂದು ವರ್ಷ ವಯಸ್ಸಿನ ಮಗು ಅಭಿರಾಮ್ ಅನುಮಾನಾಸ್ಪದವಾಗಿ ಕಣ್ಮರೆಯಾಗಿದ್ದಾನೆ.

ಕುಟುಂಬ ಸದಸ್ಯರು ಮನೆಯೊಳಗೆ ಕೆಲಸ ಮಾಡ್ತಾ ಇದ್ದ ವೇಳೆ ಅಭಿರಾಮ್ ಹೊರಗೆ ಆಟವಾಡ್ತಾ ಇದ್ದ. ಈ ಸಂದರ್ಭದಲ್ಲಿ ಬೆಳಗ್ಗೆಯಿಂದಲೇ ಒಂದು ಆಟೋವನ್ನು ತಂದು ಯಾರೋ ಅಪರಿಚಿತರು ನಿಲ್ಲಿಸಿಕೊಂಡಿದ್ದರು. ಆ ಇಬ್ಬರು ಮಧ್ಯಾಹ್ನದ ಹೊತ್ತಿನಲ್ಲಿ ಬೈಕ್‍ ನಲ್ಲಿ ಬಂದು ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ