ಸಾಕಪ್ಪಾ ಸಾಕು ಮಳೆ !

Kannada News

06-10-2017

ಬೆಂಗಳೂರು: ನಗರದಲ್ಲಿ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ಅಬ್ಬರಿಸಿದ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಇದೀಗ ಮತ್ತೆ ಹಲವೆಡೆ ಮಳೆ ಸುರಿದಿದ್ದು, ನಗರ ಸಹಜ ಸ್ಥಿತಿಗೆ ಮರಳಿಲ್ಲ. ನಗರದ ಹಲವು ರಸ್ತೆಗಳು ನೀರಿನಿಂದಾವೃತವಾಗಿವೆ, ಇನ್ನು ಜನರು ಓಡಾಡಲು ಪರದಾಡುತ್ತಿದ್ದಾರೆ. ಈಗಲೂ ಕೆಂಪೇಗೌಡ್ ಬಸ್ ನಿಲ್ದಾಣದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಟರ್ಮಿನಲ್‌ 2 ರಲ್ಲಿ ಇನ್ನೂ ಕೂಡ ನೀರು ಹಾಗೇ ಇದ್ದು, ಮೆಜೆಸ್ಟಿಕ್‌ ಕೆರೆಯಂತೆ ಕಾಣುತ್ತಿದೆ.

ನಗರದ ಬೊಮ್ಮನಹಳ್ಳಿ, ಬಿಟಿಎಮ್ ಲೇಔಟ್, ಸಂಪಂಗಿರಾಮನಗರದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಎಚ್‍ಎಸ್‍ಆರ್ ಬಡಾವಣೆ ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ವು. ಬಡಾವಣೆಯ 5, 6 ಮತ್ತು 7 ನೇ ಹಂತದಲ್ಲಿ ರಸ್ತೆ ಮೇಲೆಲ್ಲಾ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದ್ರು. ಒಟ್ಟಾರೆ ಮಳೆಗೆ ಬೆಂಗಳೂರಿನ ಜನ ಹೈರಾಣಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಸಾಕಪ್ಪಾ ಸಾಕು ಮಳೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ